ಪ್ರಿಯಾಂಕ್ ಖರ್ಗೆ 
ರಾಜಕೀಯ

'ಸ್ಟಿಂಗ್' ಹಿಂದೆ ಕುಮಾರಸ್ವಾಮಿಯೇ ಯಾಕೆ ಇರಬಾರದು? ಅವರ ಬಳಿ ದಾಖಲೆ ಇದ್ದರೇ ನೀಡಲಿ: ಪ್ರಿಯಾಂಕ್ ಖರ್ಗೆ

ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಬಳಿ ನಿರ್ದಿಷ್ಟ ಮಾಹಿತಿ ಅಥವಾ ದಾಖಲೆ ಇದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಿ.

ಕಲಬುರಗಿ: ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರ ಬಳಿ ನಿರ್ದಿಷ್ಟ ಮಾಹಿತಿ ಅಥವಾ ದಾಖಲೆ ಇದ್ದರೆ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಿ. ನಮ್ಮ ಮೇಲೆ ನಂಬಿಕೆ ಇಲ್ಲದಿದ್ದರೆ ನ್ಯಾಯಾಲಯದ ಮುಂದೆ ದಾಖಲೆಗಳನ್ನು ಸಲ್ಲಿಸಿ ಸತ್ಯಾಂಶವನ್ನು ಸಾಬೀತುಪಡಿಸಲಿ ಎಂದು ಪ್ರಿಯಾಂಕ್ ಖರ್ಗೆ ಅವರು ಶನಿವಾರ ತಿರುಗೇಟು ನೀಡಿದ್ದಾರೆ.

ಇಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸ್ಟಿಂಗ್ ಪ್ರಕರಣದ ಕುರಿತು ಸಮರ್ಪಕ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬರಲಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರೇ ಇದರ ಹಿಂದೆ ಯಾಕೆ ಇರಬಾರದು ಎಂದು ಪ್ರಶ್ನಿಸಿದರು.

ತನಿಖೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ಅವರ ಬಳಿ ದಾಖಲೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಿ. ತನಿಖೆ ವೇಳೆ ಸಿಕ್ಕಿರುವ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ. ವಿಡಿಯೋದಲ್ಲಿ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಸಂಬಂಧಪಟ್ಟವರನ್ನು ಕರೆದು ವಿಚಾರಣೆ ನಡೆಸಲಾಗಿದೆಯೇ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆಯೇ ಎಂದು ಪ್ರಶ್ನಿಸಿದರು.

ನಮ್ಮ ತನಿಖೆ ಬಗ್ಗೆ ಅವರಿಗೆ ಏನು ಗೊತ್ತು? ನೀವು ಡಿಜಿ ಕಚೇರಿಗೆ ಹೋಗಿದ್ದೀರಲ್ಲ, ನಿಮ್ಮ ಬಳಿ ದಾಖಲೆಗಳಿದ್ದರೆ ಕೊಡಿ. ಕುಮಾರಸ್ವಾಮಿ ಅವರೇ, ನಿಮ್ಮ ಕುರ್ಚಿಯ ಘನತೆ ಕಾಪಾಡಿಕೊಳ್ಳಿ. ಓಡಿಹೋಗುವ ಕೆಲಸ ಮಾಡಬೇಡಿ. ನಿಮ್ಮ ಮನಸ್ಥಿತಿಯನ್ನು ಕರ್ನಾಟಕದ ಜನ ನೋಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸ್ಟಿಂಗ್ ಆಪರೇಷನ್‌ನಲ್ಲಿ ತಮ್ಮ ಕೈವಾಡವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರೇ ಸ್ಟಿಂಗ್ ಮಾಡಿಸಿದ್ದಾರೆ ಎಂದು ತಾನೂ ಆರೋಪಿಸಬಹುದು. ಆದರೆ, ದಾಖಲೆಗಳಿಲ್ಲದೆ ಮಾತನಾಡುವುದಿಲ್ಲ. ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಲಿ, ಆ ಬಳಿಕ ನೋಡೋಣ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಷ್ಟೇ ಅಸೂಯೆ ಇಲ್ಲ, ದಲಿತ ಸಮಾಜದ ಬಗ್ಗೆಯೂ ಅಸೂಯೆ ಇದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಭಾರತ ತೊರೆಯುವಂತೆ' ನೋಟಿಸ್ ಕಾನೂನು ಬಾಹಿರ: ಹೈಕೋರ್ಟ್‌ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಈ ದೇಶದಲ್ಲಿ ಸ್ಟಿಂಗ್ ಆಪರೇಷನ್ 'ಪಿತಾಮಹ' ಅಂತ ಯಾರಾದ್ರೂ ಇದ್ರೆ ಅದು ಮೋದಿ: ಹಳೇ ಘಟನೆ ಕೆದಕಿದ ಬಿಕೆ ಹರಿಪ್ರಸಾದ್

ನಾನೇ ವಿಡಿಯೋ ಮಾಡಿದ್ದೇನೆಂದು ಕಿಂಗ್ ಪಿನ್ ಹೇಳಿದ್ದಾರೆ; ಇದನ್ನೆಲ್ಲ ನೋಡಿ ಸಿದ್ದರಾಮಯ್ಯ ರಕ್ತ ಕುದಿಯುತ್ತಿಲ್ವಾ?: HDK

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅ. 22ರ ವರೆಗೆ ಭಾರೀ ಮಳೆ; ಯೆಲ್ಲೊ ಅಲರ್ಟ್ ಘೋಷಣೆ

ಅವಧಿ ಮೀರಿದ ಆಹಾರ ಉತ್ಪನ್ನ ಮಾರಾಟ: ರಿಲಯನ್ಸ್ ರಿಟೇಲ್, ಬ್ಲಿಂಕಿಟ್, ಜೊಮ್ಯಾಟೊ ಹೈಪರ್‌ಪ್ಯೂರ್‌ ವಿರುದ್ಧ FIR ದಾಖಲು