ಸಿದ್ದರಾಮಯ್ಯ ಮತ್ತು ಶೋಭಾ ಕರಂದ್ಲಾಜೆ 
ರಾಜಕೀಯ

ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್: ಬ್ಲ್ಯಾಕ್‌ಮೇಲ್‌ ಮಾಡಿ ಸಿದ್ದರಾಮಯ್ಯ ರಾಜೀನಾಮೆ; ಶೋಭಾ ಕರಂದ್ಲಾಜೆ

ರಾಜ್ಯದಲ್ಲಿ ಬ್ಲ್ಯಾಕ್‌ ಮೇಲ್ ಸರ್ಕಾರ ಇದೆ. ಅವರ ಪಾರ್ಟಿ ಒಳಗೆ, ಸರ್ಕಾರದ ಒಳಗೆ ಬ್ಲ್ಯಾಕ್‌ಮೇಲ್‌ ಮಾಡಿಕೊಂಡು ಆಡಳಿತ ಮಾಡ್ತಿದ್ದಾರೆ. ಸಿದ್ದರಾಮಯ್ಯರನ್ನ ಬ್ಲ್ಯಾಕ್‌ಮೇಲ್‌ ಮಾಡಿ ರಾಜೀನಾಮೆ ಕೊಡಿಸಿದ್ರು,

ಮೈಸೂರು: ಸಿದ್ದರಾಮ್ಯಯ ಅವರನ್ನ ಬ್ಲ್ಯಾಕ್‌ಮೇಲ್‌ ಮಾಡಿ ರಾಜೀನಾಮೆ ಕೊಡಿಸಿದ್ರು ಎನ್ನುವ ಮಾಹಿತಿ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಮೈಸೂರಿನ ಅರಮನೆ ಆವರಣದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ದಸರಾ ಗಜಪಡೆ ಮಾವುತರು ಕಾವಾಡಿಗಳ ಕುಟುಂಬಕ್ಕೆ ಉಪಹಾರ ವ್ಯವಸ್ಥೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸ್ಟಿಂಗ್‌ ಆಪರೇಷನ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಬ್ಲ್ಯಾಕ್‌ ಮೇಲ್ ಸರ್ಕಾರ ಇದೆ. ಅವರ ಪಾರ್ಟಿ ಒಳಗೆ, ಸರ್ಕಾರದ ಒಳಗೆ ಬ್ಲ್ಯಾಕ್‌ಮೇಲ್‌ ಮಾಡಿಕೊಂಡು ಆಡಳಿತ ಮಾಡ್ತಿದ್ದಾರೆ. ಸಿದ್ದರಾಮಯ್ಯರನ್ನ ಬ್ಲ್ಯಾಕ್‌ಮೇಲ್‌ ಮಾಡಿ ರಾಜೀನಾಮೆ ಕೊಡಿಸಿದ್ರು, ಅನ್ನೋ ಸುದ್ದಿ ಹರಿದಾಡುತ್ತಿದೆ. ಕರ್ನಾಟಕ ರಾಜ್ಯಕ್ಕೆ ಇದೊಂದು ಕಪ್ಪು ಚುಕ್ಕೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಅಧಿಕಾರ ಪಡೆಯಲಿಕ್ಕೆ ಯಾರಿಗೋ ಬ್ಲ್ಯಾಕ್‌ಮೇಲ್ ಮಾಡ್ತಾರೆ. ಸ್ಟಿಂಗ್ ಆಪರೇಷನ್‌ ಮಾಡ್ತಾರೆ, ಅಧಿಕಾರ ದುರುಪಯೋಗ ಮಾಡ್ತಿದ್ದಾರೆ. ಸಿಡಿ ಇಟ್ಟುಕೊಂಡು ಕೆಲವರಿಗೆ ಬೆದರಿಸ್ತಾರೆ. ನಮ್ಮ ರಾಜ್ಯದಲ್ಲಿ ಏನಾಗ್ತಿದೆ? ಅಂತಾ ಬೇರೆ ರಾಜ್ಯದವರು ಕೇಳ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಇದಕ್ಕೆ ಇತಿಶ್ರೀ ಆಡಬೇಕು, ತಕ್ಷಣ ಎಸ್‌ಐಟಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸ್ಟಿಂಗ್‌ ಆಪರೇಷನ್‌ ರೀತಿಯ ಕೆಲಸ ಮಾಡುವವರಿಗೆ ಉಗ್ರವಾದ ಶಿಕ್ಷೆ ಆಗಬೇಕು. ನಾನು ಸಿಎಂ ಬಳಿ ಮನವಿ ಮಾಡ್ತೇನೆ. ಜನ ನಿಮ್ಮತ್ತ ಬೊಟ್ಟು ಮಾಡ್ತಿದ್ದಾರೆ ಎಂದು ಮೈಸೂರಿನಲ್ಲಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಬ್ಯಾಂಡೇಜ್ ಧರಿಸಿರುವ ನಟನ ಫಸ್ಟ್ ಇಮೇಜ್; ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಡಿಸಿಎಂ ಏಕನಾಥ್ ಶಿಂಧೆ; Video

ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್: ಸೋಷಿಯಲ್ ಮೀಡಿಯಾದಲ್ಲಿ ದಾಳಿ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್; Video

ಕಬ್ಬು ಬೆಳೆಗಾರರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ: ಸಂಧಾನ ಯಶಸ್ವಿ?; Video

ವಿಜಯದಶಮಿಯೊಳಗೆ ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ ಗಳನ್ನು ಬಂಧಿಸಬೇಕು-ಸರ್ಕಾರಕ್ಕೆ ಕುಮಾರಸ್ವಾಮಿ ಡೆಡ್ ಲೈನ್

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ; ನಟ ಪ್ರಾಣಾಪಾಯದಿಂದ ಪಾರು, Video