ಅನಿತಾ ಕುಮಾರಸ್ವಾಮಿ 
ರಾಜಕೀಯ

ನನ್ನ ಕಳಂಕ ರಹಿತ ಚಾರಿತ್ರ್ಯಕ್ಕೆ ಧಕ್ಕೆ: ಸಂಚಿನ ಹಿಂದಿರುವ ಸೂತ್ರಧಾರರಿಗೆ ದುರ್ಗಾದೇವಿಯಿಂದಲೇ ತಕ್ಕ ಶಾಸ್ತಿ; ಅನಿತಾ ಕುಮಾರಸ್ವಾಮಿ

ಸುದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಕಳಂಕ ರಹಿತ ಚಾರಿತ್ರ್ಯಕ್ಕೆ ಧಕ್ಕೆ ತರಲು ಧರ್ಮ ಮತ್ತು ಸತ್ಯದ ಹಬ್ಬವಾದ ನವರಾತ್ರಿಯ ಸಂದರ್ಭದಲ್ಲೇ ಇಂತಹ ತೀರಾ ಕೀಳುಮಟ್ಟದ, ದುರುದ್ದೇಶ ಪ್ರೇರಿತ ನಿಂದನೆಗಿಳಿದಿರುವುದಕ್ಕೆ ನನ್ನ ಧಿಕ್ಕಾರವಿದೆ.

ಬೆಂಗಳೂರು : ಪವಿತ್ರ ನವರಾತ್ರಿಯ ದಿನಗಳಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರು ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾದದ್ದು, ಸಂಪೂರ್ಣ ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಸೃಷ್ಟಿ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಸುದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಕಳಂಕ ರಹಿತ ಚಾರಿತ್ರ್ಯಕ್ಕೆ ಧಕ್ಕೆ ತರಲು ಧರ್ಮ ಮತ್ತು ಸತ್ಯದ ಹಬ್ಬವಾದ ನವರಾತ್ರಿಯ ಸಂದರ್ಭದಲ್ಲೇ ಇಂತಹ ತೀರಾ ಕೀಳುಮಟ್ಟದ, ದುರುದ್ದೇಶ ಪ್ರೇರಿತ ನಿಂದನೆಗಿಳಿದಿರುವುದಕ್ಕೆ ನನ್ನ ಧಿಕ್ಕಾರವಿದೆ. ಸತ್ಯವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ರೀತಿಯ ಚಾರಿತ್ರ್ಯವಧೆ ಹಾಗೂ ಕಲ್ಪಿತ ಸಂಚಿನ ಹಿಂದೆ ಇರುವ ಸೂತ್ರಧಾರರಿಗೂ ಮತ್ತು ಅದನ್ನು ಕಾರ್ಯರೂಪಕ್ಕೆ ತಂದವರಿಗೂ ಆ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆ. ಈ ಅಧರ್ಮಕ್ಕೆ ತಾಯಿ ದುರ್ಗೆಯ ದಂಡನೆಯೇ ಅಂತಿಮ ಉತ್ತರ ಎಂದು ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ನಾಯಕರ ಅತಿಕ್ರಮಣ ಪ್ರಕರಣ ಅಪರಾಧ ವಿಭಾಗಕ್ಕೆ ವರ್ಗಾವಣೆ: ನ್ಯಾಯಾಂಗ ಬಂಧನ ಬೆನ್ನಲ್ಲೇ ಪೊಲೀಸರ ಶಾಕ್

ಸ್ಟಿಂಗ್ ಆಪರೇಷನ್ ಕೋಲಾಹಲ: ಸಿದ್ದರಾಮಯ್ಯ ಮೌನವೇಕೆ; ಕಾಂಗ್ರೆಸ್ ನಲ್ಲಿ, ರಾಜಕೀಯ ವಲಯದಲ್ಲಿ ಎದ್ದಿದೆ ಕುತೂಹಲ

ಕಬ್ಬು ರೈತರ ‘ಹುಬ್ಬಳ್ಳಿ ಚಲೋ’ ಪ್ರತಿಭಟನಾ ಮೆರವಣಿಗೆ ತಾತ್ಕಾಲಿಕ ಸ್ಥಗಿತ: ಸರ್ಕಾರಕ್ಕೆ ನವೆಂಬರ್ 26 ಗಡುವು

ನನ್ನ ಪ್ರೀತಿಯ ಕನ್ನಡಿಗರೇ ಮನಸ್ಪೂರ್ತಿಯಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ: ಸೋನು ನಿಗಮ್

'ಅಮ್ಮಾ, ಅಮ್ಮಾ': ದುರ್ಗಾ ಪೂಜೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ TMC ಸಂಸದ ಕಲ್ಯಾಣ್ ಬ್ಯಾನರ್ಜಿ; ವಿಡಿಯೋ ವೈರಲ್