ಬಿಕೆ ಹರಿಪ್ರಸಾದ್, ನರೇಂದ್ರ ಮೋದಿ 
ರಾಜಕೀಯ

'ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಮದುವೆಯೇ ಆಗಿಲ್ಲ: ಪ್ರಧಾನಿ ಮೋದಿ ವಿರುದ್ದ ಏಕವಚನದಲ್ಲೇ ಬಿಕೆ ಹರಿಪ್ರಸಾದ್ ವಾಗ್ದಾಳಿ

ಇಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು, ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಿ ಆಗಿ ಬಿಟ್ಟಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಶನಿವಾರ ಏಕವಚನದಲ್ಲೇ ತೀವ್ರ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, 'ತ್ರಿಪಲ್ ತಲಾಕ್ ಅಂತೆ, ಇವನಿಗೆ ಯಾಕೆ ಬೇಕು? ಮದುವೆಯೇ ಆಗಿಲ್ಲ ಎಂದು ಟೀಕಿಸಿದರು.

ಇಂದು ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು, ನಮ್ಮಲ್ಲಿ ಮಹಾಮಾನವರೊಬ್ಬರು ಪ್ರಧಾನಿ ಆಗಿ ಬಿಟ್ಟಿದ್ದಾರೆ. ಮನ್ ಕಿ ಬಾತ್ ಅಂತ ಮಾತನಾಡುತ್ತಾರೆ. 12 ವರ್ಷ ಆಯ್ತು, ಧಾರ್ಮಿಕತೆ ಬಗ್ಗೆ 12 ನಿಮಿಷ ಮಾತನಾಡಿದ್ದು ನೋಡಿದ್ದೀರಾ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಅತಿ ಹೆಚ್ಚು ಸಾರ್ವಜನಿಕ ಉದ್ಯಮಗಳು ಇವೆ. ಎಲ್ಲಾ ಸಾರ್ವಜನಿಕ ಉದ್ಯಮಗಳನ್ನು ಕಾಂಗ್ರೆಸ್ ಸ್ಥಾಪನೆ ಮಾಡಿದೆ. ಆದರೆ ಮಹಾಮಾನವ ಪದೇ ಪದೇ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಇವ್ರು 26 ಸಾರ್ವಜನಿಕ ಉದ್ಯಮಗಳನ್ನು ಮಾರಾಟ ಮಾಡಿದ್ದಾರೆ. ಯಾರು ಮಾಡಿದ್ದು ಎಂದು ಕೇಳಿ ನೋಡಿ ಎಂದು ಬಿಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಪಂಡಿತ್ ಜವಾಹರ್ ಲಾಲ್ ನೆಹರು ಅವರಿಂದ ಹಿಡಿದು ನರಸಿಂಹರಾಯರವರೆಗೂ ಸಾರ್ವಜನಿಕ ಉದ್ಯಮ ಮಾಡಿದ್ದು ಕಾಂಗ್ರೆಸ್. ನಾನು ಗುಜರಾತ್‌ನಲ್ಲಿ 4.5 ವರ್ಷ ಕಾಂಗ್ರೆಸ್ ಉಸ್ತುವಾರಿ ವಹಿಸಿದ್ದೇನೆ. ಅಲ್ಲಿ ಒಂದೇ ಒಂದು ಸಾರ್ವಜನಿಕ ಉದ್ಯಮ ಮಾಡಲಿಲ್ಲ.ಈಗ ಏನಿದ್ರೂ ಅದಾನಿ, ಅಂಬಾನಿ ಒಂದಷ್ಟು ಜನ ಬಂಡವಾಳ ಶಾಹಿಗಳು ಇದ್ದಾರೆ. ಎಲ್ಲವನ್ನೂ ಖರೀದಿ ಮಾಡುತ್ತಾರೆ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ Bypoll, ಕ್ಷಣಕ್ಕೊಂದು ತಿರುವು: ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ಮಳೆರಾಯನ ಮುನಿಸು: ದೇಶದಲ್ಲಿ ಶೇ.14.88ರಷ್ಟು ಮುಂಗಾರು ಕೊರತೆ!

'ಪುರುಷರಿಗೂ ಪಿರಿಯಡ್ಸ್ ಆಗಲಿ ಎಂದು ಸಾವಿರ ಬಾರಿ ಪ್ರಾರ್ಥಿಸಿದ್ದೇನೆ': ರಶ್ಮಿಕಾ ನಂತರ ನಟಿ ಶ್ರುತಿ ಹಾಸನ್ ಬೋಲ್ಡ್ ಮಾತು!

ಟೂರಿಂಗ್ ಟಾಕೀಸ್ ಟೀಕೆ: ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ; ಅಶೋಕಣ್ಣ ಲೇಜಿ, ಯೂಸ್ ಲೆಸ್ ಸ್ಟಾರ್; ಸಚಿವ ಹೆಚ್.ಸಿ ಬಾಲಕೃಷ್ಣ ತಿರುಗೇಟು

ಕರಾವಳಿ-ಮಲೆನಾಡು ಪ್ರವಾಸೋದ್ಯಮಕ್ಕೆ ಬಂಪರ್: 500 ಕೋಟಿ ರೂ ಅನುದಾನ; ಹೂಡಿಕೆದಾರರಿಗೆ ರೆಡ್ ಕಾರ್ಪೆಟ್