ಸಿದ್ದರಾಮಯ್ಯ, ಹೆಚ್ ಸಿ ಮಹದೇವಪ್ಪ 
ರಾಜಕೀಯ

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!

ಚುನಾವಣಾ ವ್ಯವಸ್ಥೆ ಈಗ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಜನ ಕಾರಣರಲ್ಲ. ರಾಜಕಾರಣಿಗಳೇ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.

ದಾವಣಗೆರೆ: ಚುನಾವಣಾ ವ್ಯವಸ್ಥೆ ಈಗ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ಜನ ಕಾರಣರಲ್ಲ. ರಾಜಕಾರಣಿಗಳೇ ವ್ಯವಸ್ಥೆಯನ್ನು ಹಾಳು ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಸಿ ಮಹದೇವಪ್ಪ. ಈಗಾಗಲೇ ನಾವು ಇಂತಹ ವ್ಯವಸ್ಥೆಯಲ್ಲಿ ತುಂಬಾ ಮುಂದೆ ಬಂದು ಬಿಟ್ಟಿದ್ದೇವೆ. ಈ ರೀತಿ ಹೇಳುವರು ಮೊದಲೇ ಚುನಾವಣೆ ವ್ಯವಸ್ಥೆಯಿಂದ ದೂರ ಇರಬೇಕಿತ್ತು. ಸಂವಿಧಾನ ಜಾರಿ ಬಂದಾಗಲೇ‌ ಕೃಪಲಾನಿಯಂತವರು ಅಂಬೇಡ್ಕರ್ ಗೆ ಪ್ರಶ್ನೆ ಮಾಡಿದ್ದರು. ಹಣ ಕೊಟ್ಟು ಮತ ಖರೀದಿಸುತ್ತೇವೆ ಎಂದಿದ್ದರು. ಇಂತಹ ಚಿಂತನೆಗಳು‌‌ ಮೊದಲಿನಿಂದಲೂ ನಡೆದುಕೊಂಡು ಬಂದಿವೆ. ಇದು ಸುಧಾರಣೆ ಆಗಬೇಕಿದ್ದರೆ, ಚುನಾವಣಾ ಆಯೋಗ ಮಹತ್ವದ ಹೆಜ್ಜೆ ಇಡಬೇಕು. ತನಿಖಾ ಸಂಸ್ಥೆಗಳು ರಾಜಕೀಯ ದಾಳವಾಗಿ ಬಳಕೆ ಆದರೆ ಪ್ರಜಾಪ್ರಭುತ್ವ ಕತ್ತು ಹಿಚುಕಿದಂತಾಗುತ್ತದೆ ಎಂದರು.

ನಮ್ಮ ಸಿದ್ಧಾಂತಕ್ಕೆ ನಾವು ಬದ್ಧರಾಗಿರಬೇಕು. ಅಂಬೇಡ್ಕರ್ ನಮಗೆ ಪ್ರಜಾಪ್ರಭುತ್ವ ಕೊಟ್ಟಿದ್ದು. ಇಂತಹ ಪ್ರಜಾಪ್ರಭುತ್ವ ಯಶಸ್ವಿಯಾಗಲು ಎಸ್ಸಿ ಎಸ್ಟಿ, ಹತ್ತಾರು ಜಾತಿಗಳು, ಅಲ್ಪಸಂಖ್ಯಾತ ಹಿಂದುಳಿದವರು ಒಂದಾಗಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ ಗಳು!

ಎಲ್.ಕೆ. ಅಡ್ವಾಣಿ, ಮನೀಶ್ ಸಿಸೋಡಿಯಾ ಸೇರಿದಂತೆ ದೆಹಲಿಯ 33.13 ಲಕ್ಷ ಮತದಾರರಿಗೆ SIR ನೋಟಿಸ್‌!

ವಾರಣಾಸಿ ಎನ್‌ಕೌಂಟರ್‌: 30 ಲಕ್ಷ ರೂ ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಹತ್ಯೆ!

ರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್‌ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್‌ಗಳಿಂದ ಅಟ್ಯಾಕ್!