ಶಿವಲಿಂಗೇಗೌಡ 
ರಾಜಕೀಯ

'ಕಾಂಗ್ರೆಸ್ ಸರ್ಕಾರಕ್ಕೆ 100 ದಿನ: ಗೌರವಯುತ ಲಂಚದ ವಿಶೇಷ ಅಂಚೆ ಚೀಟಿ'!

ಶಿವಲಿಂಗೇಗೌಡ ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ, ಮಂಗಳವಾರ 'ಗೌರವಯುತ ಲಂಚದ ವಿಶೇಷ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಬೆಂಗಳೂರು: ಲಂಚದ ವಿಷಯವಾಗಿ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ ಎಂಬ ಸಚಿವ ಶಿವಲಿಂಗೇಗೌಡ ಅವರ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಶಿವಲಿಂಗೇಗೌಡ ಅವರ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ, ಮಂಗಳವಾರ 'ಗೌರವಯುತ ಲಂಚದ ವಿಶೇಷ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಶಿವಲಿಂಗೇಗೌಡ ಅವರ ಫೋಟೋ ಇರುವ ಅಂಚೆ ಚೀಟಿಯನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ, "ಲಂಚವನ್ನು ಗೌರವಯುತ"ವಾಗಿ ಕೊಡಬೇಕು ಎಂದು ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಲಿಖಿತ ನಿಯಮ ಜಾರಿಗೊಳಿಸಿದೆ!

ಹಾಗೇ ಸರ್ಕಾರ ನೂರು ದಿನ ಪೂರೈಸಿದ ಸಂದರ್ಭ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿ, ಲಂಚಾವತಾರಕ್ಕೆ ಪ್ರೋತ್ಸಾಹ ನೀಡಬಹುದು! ಎಂದು ಕಿಡಿ ಕಾರಿದೆ.

ಹಾಸನ‌ ಜಿಲ್ಲೆಯ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಸಚಿವ ಶಿವಲಿಂಗೇಗೌಡ ಅವರು ಲಂಚದ ವಿಚಾರಕ್ಕೆ ಎಡವಟ್ಟು ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ವಿಪಕ್ಷಗಳಿಗೆ ಇದೇ ಅಸ್ತ್ರವಾಗಿದೆ.

ಇನ್ನು ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆಯಿಂದ ಸಚಿವ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಹ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ ಹಾಕಿದ್ದ ಇನ್ಸ್‌ಪೆಕ್ಟರ್‌ ಧನಂಜಯ್‌ಗೆ ಮತ್ತೊಂದು ಸಂಕಷ್ಟ; ಪೊಲೀಸ್ ವರಿಷ್ಠಾಧಿಕಾರಿಗೆ ದೂರು

ಜಮುಯಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪ್ರಮುಖ ಆರೋಪಿ ಕಾಲಿಗೆ ಪೊಲೀಸರ ಗುಂಡು!

‘ಡಿಕೆಶಿಗಿಂತ 4 ಪಟ್ಟು ಹೆಚ್ಚು ಸಂಪತ್ತು HDK ಬಳಿ ಇದೆ, ಏರ್​ಪೋರ್ಟ್ ರಸ್ತೆ, ನೆಲಮಂಗಲದಲ್ಲೂ ಆಸ್ತಿ ಇದೆ; ಇದೆಲ್ಲ ಎಲ್ಲಿಂದ ಸಂಪಾದನೆ ಮಾಡಿದರು?

Video: ಪತ್ನಿ, ಮಗಳೊಂದಿಗೆ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದ ಶಾರುಖ್ ಖಾನ್; ಗಣೇಶನಿಗೆ ಭಕ್ತಿಯಿಂದ ಕೈಮುಗಿದ ಕಿಂಗ್ ಖಾನ್!