ಎಚ್ ಡಿ ಕುಮಾರಸ್ವಾಮಿ 
ರಾಜಕೀಯ

ರಾಜ್ಯದಲ್ಲಿರುವುದು ನಾಗರಿಕ ಸರ್ಕಾರವೋ? ರಾಕ್ಷಸ ಸರ್ಕಾರವೋ? 'ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ: ಎಚ್.ಡಿ ಕುಮಾರಸ್ವಾಮಿ

ಬಿಡದಿಯ ಭೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ 'ದೈವದ್ರೋಹ'ಕ್ಕೂ ಮೀರಿದ್ದು. ಧರಣಿ ಕೂರಲು ಪೆಂಡಾಲ್ ಹಾಕಲೆತ್ನಿಸಿದಾಗ ಅದನ್ನು ಕಿತ್ತುಕೊಂಡು ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ.

ಬೆಂಗಳೂರು: ‘ಬಿಡದಿ ಭೂಮಿ 'ರಿಯಲ್ ಎಸ್ಟೇಟ್ ವ್ಯಾಪಾರಿ' ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, 'ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್‘ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಬರೆದುಕೊಂಡಿರುವ ಅವರು, ಕರ್ನಾಟಕದಲ್ಲಿ ನಾಗರಿಕ ಸರಕಾರವಿದೆಯೋ ಅಥವಾ ರಾಕ್ಷಸ ಸರಕಾರ ಇದೆಯೋ? ತಮ್ಮ ಭೂಮಿ ಉಳಿಸಿಕೊಳ್ಳಲು ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ, ಬಲಪ್ರಯೋಗದಿಂದ ಅವರನ್ನು ಹತ್ತಿಕ್ಕಲೆತ್ನಿಸಿದ ದುಷ್ಪ್ರಯತ್ನ ಖಂಡನಾರ್ಹ.

ಬಿಡದಿಯ ಭೈರಮಂಗಲದಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ದಬ್ಬಾಳಿಕೆ 'ದೈವದ್ರೋಹ'ಕ್ಕೂ ಮೀರಿದ್ದು. ಧರಣಿ ಕೂರಲು ಪೆಂಡಾಲ್ ಹಾಕಲೆತ್ನಿಸಿದಾಗ ಅದನ್ನು ಕಿತ್ತುಕೊಂಡು ಅನ್ನದಾತರನ್ನು ಉರಿಬಿಸಿಲಿನಲ್ಲೇ ಕೂರಿಸಿದ ಪೊಲೀಸರ ವರ್ತನೆ ಅಕ್ಷಮ್ಯ.

ಇಂತಹ ಕೃತ್ಯಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಬಿಡದಿ ಭೂಮಿ 'ರಿಯಲ್ ಎಸ್ಟೇಟ್ ವ್ಯಾಪಾರಿ' ಕಪಿಮುಷ್ಟಿಗೆ ಸಿಲುಕಿದೆ. ನೆನಪಿರಲಿ, 'ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಮುಳುವಾಯ್ತಾ ಓಲೈಕೆ ರಾಜಕಾರಣ?; ಯಾದವರು 7%, ಮುಸ್ಲಿಮರು 22%, ನಮ್ಮಲ್ಲೇ CM ಅಭರ್ಥಿ ಮಾಡಿ, ಅಖಿಲೇಶ್ ಯಾದವ್`ಗೆ ಮೌಲಾನಾ ಗಡುವು!

ಹಬ್ಬದ ಸಂಭ್ರಮದ ನಡುವೆ ದುರಂತ; ಕೊಯೆಲ್ ನದಿಯಲ್ಲಿ ಮೂವರು ಅಪ್ರಾಪ್ತರು ಸೇರಿ 5 ಮಂದಿ ಜಲಸಮಾಧಿ!