ಪ್ರಿಯಾಂಕ್ ಖರ್ಗೆ 
ರಾಜಕೀಯ

RSS 'ಗುರು ದಕ್ಷಿಣೆ' ರೂಪದಲ್ಲಿ ಏಕೆ ಹಣ ಸಂಗ್ರಹಿಸುತ್ತಿದೆ: ಆರ್ಥಿಕ ಪಾರದರ್ಶಕತೆ ವಿಷಯದಲ್ಲಿ ಹಿಂಜರಿಕೆ ಏಕೆ? ಪ್ರಿಯಾಂಕ್ ಖರ್ಗೆ

ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ, ಬಿಜೆಪಿ ಅಭ್ಯರ್ಥಿಗಳ ಮಕ್ಕಳು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವ, ಶಾಖೆಗಳಿಗೆ ಹಾಜರಾಗುವ, ಗೋಶಾಲೆಗಳಲ್ಲಿ ಸೇವೆ ಸಲ್ಲಿಸುವ ಫೋಟೋಗಳಿದ್ದರೆ ಹಂಚಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರು: ಬಿಜೆಪಿ ನಾಯಕರ ಮಕ್ಕಳು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಭಾಗವಹಿಸುವ ಕುರಿತು ಹಾಗೂ ಸಂಘಟನೆಯ ಆರ್ಥಿಕ ಪಾರದರ್ಶಕತೆಯ ಬಗ್ಗೆ ಉತ್ತರ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ, ಬಿಜೆಪಿ ಅಭ್ಯರ್ಥಿಗಳ ಮಕ್ಕಳು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವ, ಶಾಖೆಗಳಿಗೆ ಹಾಜರಾಗುವ, ಗೋಶಾಲೆಗಳಲ್ಲಿ ಸೇವೆ ಸಲ್ಲಿಸುವ ಅಥವಾ ಸಂಘಟನೆಯು ಪ್ರತಿಪಾದಿಸುವ ಮತ್ತು ಜೀವನಶೈಲಿಯನ್ನು ಅನುಸರಿಸುತ್ತಿರುವ ಫೋಟೋಗಳನ್ನು ತೋರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಪ್ರಚಾರದ ಭರಾಟೆಯನ್ನು ಒಮ್ಮೆ ಪರಿಶೀಲಿಸೋಣ. ಕರ್ನಾಟಕದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲೊಂದು ಸರಳ ಸವಾಲು, ಬಿಜೆಪಿ ಅಭ್ಯರ್ಥಿಗಳ ಮಕ್ಕಳು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿರುವುದು, ಶಾಖೆಗಳಿಗೆ ಹಾಜರಾಗುತ್ತಿರುವುದು, ಗೋಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಅಥವಾ ಇತರರಿಗೆ ಉತ್ಸಾಹದಿಂದ ಬೋಧಿಸುವ ಜೀವನಶೈಲಿಯನ್ನು ಸ್ವತಃ ಪಾಲಿಸುತ್ತಿರುವುದನ್ನು ತೋರಿಸುವ ಫೋಟೋಗಳನ್ನು ಹಾಕಿ. ಎಷ್ಟು ಮಂದಿ ಸಿಗಬಹುದು? ಶೇಕಡಾ 10 ರಷ್ಟು ಕೂಡ ಇಲ್ಲ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅನುರಾಗ್ ಠಾಕೂರ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ಹೆಸರುಗಳನ್ನು ಪ್ರಸ್ತಾಪಿಸಿರುವ ಪ್ರಿಯಾಂಕ್ ಖರ್ಗೆ ಇವರಲ್ಲಿ ಎಷ್ಟು ಮಂದಿಯ ಮಕ್ಕಳು ಸಕ್ರಿಯ ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದಾರೆ ಅಥವಾ ನಿಯಮಿತವಾಗಿ ಶಾಖೆಗಳಿಗೆ ಹಾಜರಾಗುತ್ತಾರೆ ಎಂದು ಪ್ರಶ್ನಿಸಿದರು.

"ಆರ್‌ಎಸ್‌ಎಸ್ ರಾಷ್ಟ್ರೀಯತೆ, ಶಿಸ್ತು ಮತ್ತು ವ್ಯಕ್ತಿತ್ವ ವಿಕಸನದ ಶ್ರೇಷ್ಠ ಪಾಠಶಾಲೆ ಎಂದು ಹೇಳಿಕೊಳ್ಳುವುದಾದರೆ, ಅದರ ಪಠ್ಯಕ್ರಮವು ಕೇವಲ ಇತರರ ಮಕ್ಕಳಿಗಾಗಿ ಮಾತ್ರವೇ ಎಂಬಂತೆ ಏಕೆ ಭಾಸವಾಗುತ್ತದೆ?" ಎಂದು ಅವರು ಪ್ರಶ್ನಿಸಿದರು.

ಖರ್ಗೆ ಅವರು ಆರ್‌ಎಸ್‌ಎಸ್‌ನ ಆರ್ಥಿಕ ವ್ಯವಹಾರಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಅದರ ನೋಂದಣಿ, ಲೆಕ್ಕಪರಿಶೋಧಿತ ಲೆಕ್ಕಪತ್ರಗಳು, ದಾನಿಗಳ ವಿವರ ಬಹಿರಂಗಪಡಿಸುವಿಕೆ ಮತ್ತು ಆರ್ಥಿಕ ಪಾರದರ್ಶಕತೆಯ ಕುರಿತು ಮಾಹಿತಿ ಕೋರಿದ್ದಾರೆ.

'ಗುರು ದಕ್ಷಿಣೆ' ರೂಪದಲ್ಲಿ ಹಾಗೂ ರಾಷ್ಟ್ರೀಯತೆ, ಸಮಾಜ ಸೇವೆ ಮತ್ತು ಧರ್ಮದ ಹೆಸರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲಾಗುತ್ತಿದ್ದರೆ, ನೋಂದಣಿ, ಲೆಕ್ಕಪರಿಶೋಧಿತ ಲೆಕ್ಕಪತ್ರಗಳು, ದಾನಿಗಳ ವಿವರಗಳ ಬಹಿರಂಗಪಡಿಸುವಿಕೆ ಮತ್ತು ಸಂಪೂರ್ಣ ಆರ್ಥಿಕ ಪಾರದರ್ಶಕತೆಯ ವಿಷಯದಲ್ಲಿ ಏಕೆ ಹಿಂಜರಿಕೆ ಇರಬೇಕು?" ಎಂದು ಅವರು ಹೇಳಿದರು. "ಪಕ್ಷದ ಪಾಲು (ಪರ್ಸೆಂಟೇಜ್) ಮತ್ತು ಹೈಕಮಾಂಡ್ ಅನುಮೋದನೆಗಳ" ದೃಷ್ಟಿಕೋನದಿಂದ ಚಟುವಟಿಕೆಗಳನ್ನು ನೋಡುವವರಿಗೆ ಸ್ವಯಂಪ್ರೇರಿತ ಸೇವೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದ ಬಿಜೆಪಿ ಕರ್ನಾಟಕ ಘಟಕದ ಪೋಸ್ಟ್‌ಗೆ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘CECಗೆ ಒತ್ತಡ ಹೇರಿದ’ ಆರೋಪ: ಪ್ರಧಾನಿ ಮೋದಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ, ಜ್ಞಾನೇಶ್‌ ಕುಮಾರ್‌ ವಜಾಗೊಳಿಸಿ; CWC ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ದಾಖಲೆ: ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ನೀರೂ ಧಾಂಡಾ

NSA ಅಡಿ ಸಂಭಲ್ ಹಿಂಸಾಚಾರದ ಆರೋಪಿಯ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ದಂಡ!

India-China ಸಂಬಂಧ ಸುಧಾರಣೆಗೆ ಗಡಿ ಶಾಂತಿಯೇ ಪ್ರಮುಖ ಕೀಲಿಕೈ; ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ 2 ವರ್ಷಗಳ ಹಿಂದಿಗಿಂತ ಈಗ ಉತ್ತಮ: ಎಸ್. ಜೈಶಂಕರ್‌

ಗಡಿಯಾಚೆಗಿನ ಭಯೋತ್ಪಾದನೆ ಕುರಿತ ನಮ್ಮ ಕಳವಳ ಅರಿಯದಿದ್ದರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ: ಅಮೆರಿಕಕ್ಕೆ ಭಾರತ ಖಡಕ್ ಸಂದೇಶ..!