ಬೆಂಗಳೂರು: ನೈಸ್ ಯೋಜನೆ ಕುಮಾರಸ್ವಾಮಿ ಕೂಸು, ದೇವೇಗೌಡರ ಕೂಸು ಎಂದು ಹೇಳ್ತಾರೆ ಈಗಿನ ಸಿಎಂ ಡಿಕೆ ಶಿವಕುಮಾರ್. ಆದ್ರೆ ಇದು 2ಜಿ ಸ್ಕ್ಯಾಮ್, ಕೋಲ್ ಸ್ಕ್ಯಾಮ್‌ಗಿಂತ ದೊಡ್ಡ ಹಗರಣ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ಇದು ಅತ್ಯಂತ ಗಂಭೀರ ವಿಚಾರ ಎಂದಿದ್ದಾರೆ. ಯೋಜನೆ ಹೆಸರಲ್ಲಿ ರೈತರ ಬದುಕಿನ ಜೊತೆ ಚೆಲ್ಲಾಟವಾಡ್ತಿದ್ದಾರೆ. ಗುಲಾಮಗಿರಿ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡ್ತಿರೋದು ಎನ್ನುವ ಭಾವನೆ ಇದ್ದು, ಇದೆಲ್ಲವನ್ನ ದಾಖಲೆ ಸಮೇತ ಹೇಳುವೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರುತ್ತಿರುವ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಅಲ್ಲೋಲ-ಕಲ್ಲೋಲದ ಬಾಂಬ್ ಸಿಡಿಸುವುದಾಗಿ ಹೇಳಿದ್ರು. ಈ ಬಗ್ಗೆ ಇಂದು ನಥಿಂಗ್ ನೈಸ್ ಹೆಸರಲ್ಲಿ ಸುದ್ದಿಗೋಷ್ಠಿ ಕರೆದಿದ ಕುಮಾರಸ್ವಾಮಿ ಅವರು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸೌಧದ ಮೆಟ್ಟಿಲ ಮೇಲೆ ಚರ್ಚೆಗೂ ನಾನು ಸಿದ್ದ ಎಂದು ಡಿಕೆ ಶಿವಕುಮಾರ್ ಅವರಿಗೆ ಮತ್ತೆ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ನೈಸ್ ಯೋಜನೆಗೆ MOU ಆಗಿದ್ದು, ಸಹಿ ಹಾಕಿದ್ದು ದೇವೇಗೌಡರು ಅಂತ ಪದೇ ಪದೇ ಹೇಳ್ತಾರೆ. 8-11-1995ರಲ್ಲಿ ಮೆಮೋರಂಡಮ್ ಮಾಡಿರೋದು. ಆಗ VHV ಎನ್ನುವ ಅಮೇರಿಕಾ ಕಂಪನಿ, ಕಲ್ಯಾಣಿ ಹಾಗೂ SAB ಕಂಪನಿ ಜೊತೆ ಎಂಓಯು ಆಗಿತ್ತು ಎಂದು ಮಾಹಿತಿ ನೀಡಿದರು. FWA ಅಗ್ರಿಮೆಂಟ್ 3 ಏಪ್ರಿಲ್ 1997ರಂದು ಆಗುತ್ತೆ. ಎಲ್ಲಿಯೂ ಸಹ ಕೃಷಿಗೆ ಉತ್ತಮವಾದ ಭೂಮಿಯನ್ನ ಯೋಜನೆಗೆ ಗುರುತಿಸಿರೋದಿಲ್ಲ. ಒಣ ಭೂಮಿಯನ್ನ ತೆಗೆದುಕೊಳ್ಳಲು ತೀರ್ಮಾನ ಆಗಿತ್ತು. ಕೆರೆ ಜಾಗ ಕೂಡ ಬಳಸಬಾರದು ಅಂತ ಉಲ್ಲೇಖ ಆಗಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
1999ರಲ್ಲಿ ಈ ಗಿರಾಕಿ ಗುತ್ತಿಗೆದಾರ ಒಂದು ಲೆಟರ್ ಬರೆಯುತ್ತಾನೆ. ಹೈಕೋರ್ಟ್ ಸುಪ್ರೀಂಕೋರ್ಟ್‌ನಲ್ಲಿ ಪ್ರೇಮ್‌ವರ್ಕ್ ಅಗ್ರಿಮೆಂಟ್‌ಗೆ ಒಪ್ಪಿರುತ್ತಾರೆ. ಆದ್ರೆ 1999ರಲ್ಲಿ ಮತ್ತೆ ಬದಲಾವಣೆ ಮಾಡಬೇಕೆಂದು ಪತ್ರ ಬರೆಯುತ್ತಾನೆ. ನಂದಿ ಎಕಾನಾಮಿಕ್ ಕಾರಿಡಾರ್ ಎಂದು ಮತ್ತೊಂದನ್ನ ತರ್ತಾರೆ. ಇದರೊಂದಿಗೆ ಅಗಸ್ಟ್ 2002ರಲ್ಲಿ ಅಗ್ರಿಮೆಂಟ್ ಆಗಿತ್ತು.
21-5-2003ರಲ್ಲಿ ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಾಗಿತ್ತು. ಇದರಲ್ಲಿ ಹನುಮಂತರಾಯಪ್ಪ ಸಹ ಇದ್ದರು. ಈಗ ರಾಜರಾಜೇಶ್ವರಿ ನಗರದಲ್ಲಿ ಯಾರನ್ನೋ ಎಂಎಲ್‌ಎ ಮಾಡ್ಬೇಕು ಅಂತ ಏನೋ ನಡೆಸುತ್ತಿದ್ದಾರಲ್ಲ ಅವರ ಅಪ್ಪ ಹನುಮಂತ ರಾಯಪ್ಪ, ಆಗಲೇ ಇವರದ್ದು ಒಂದು ತಂಡ ಇತ್ತು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಈ ಇಬ್ಬರು ಯೋಜನೆ ಹೆಸರಲ್ಲಿ ಅಕ್ರಮವೆಸಗಿದ್ದು, ಟೌನ್ ಶಿಪ್‌ನ ಜಾಗ ಕಡಿಮೆ ಮಾಡಿ ಟೋಲ್ ರೋಡ್ ಜಾಗ ಹೆಚ್ಚಿಸಿದ್ದಾರೆ ಈ ಹಕ್ಕ- ಬುಕ್ಕರು. ಎಕೆ ಆ್ಯಂಡ್ ಡಿಕೆ ಎಂದು ಅಶೋಕ್ ಕೇಣಿ, ಡಿಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಎಚ್ ಪಟೇಲ್ , ದೇವೇಗೌಡರಿಂದ ಏನೂ ತಪ್ಪಾಗಿರಲಿಲ್ಲ. ಅವರಿಗೆ ಯೋಜನೆ ಬೇಕಾಗಿತ್ತು ಅಷ್ಟೇ. ಪ್ರೇಮ್‌ವರ್ಕ್‌ಅಗ್ರಿಮೆಂಟ್ ಅಂತಿಮ ಎಂದು 1998ರಲ್ಲಿ ಸುಪ್ರೀಂಕೋರ್ಟ್ ಸಹ ಹೇಳಿದೆ. ಆದ್ರೆ ಬಳಿಕ ತ್ರೀ ಪಾರ್ಟಿ ಅಗ್ರಿಮೆಂಟ್‌ನ 2002ರಲ್ಲಿ ಮಾಡ್ತಾರೆ. ನೈಸ್, ನೇಸ್ ಹಾಗೂ ರಾಜ್ಯ ಸರ್ಕಾರದ ನಡುವೆ ತ್ರಿಪಾರ್ಟಿ ಅಗ್ರಿಮೆಂಟ್, ಇದು ಆಕ್ಸ್‌ಫರ್ಡ್ ಯುನಿವರ್ಸಿಟಿ ಅವರು ಮಾಡಿರೋದು. ಅದಕ್ಕೆ ನಾನು ಹೇಳಿದ್ದು ಡಿಕೆ-ಎಕೆ ಎಂದು. ಆಗ ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಆಗಿದ್ರು. 2004ರಲ್ಲಿ ಪ್ರೇಮ್ ವರ್ಕ ಅಗ್ರಿಮೆಂಟ್ ಬದಲಾವಣೆ ಮಾಡಿ ಅಕ್ರಮ ಮಾಡಿದ್ರು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ರು..