ಹಾಸನ: ಶ್ರವಣಬೆಳಗೊಳದಲ್ಲಿ ನಡೆಯಲಿರುವ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಭದ್ರತಾ ದೃಷ್ಟಿಯಿಂದ 100 ಸಿಸಿ ಟಿವಿ ಅಳವಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.
ಇನ್ನಿತರ ಭದ್ರತಾ ವ್ಯವಸ್ಥೆ, ವಿಐಪಿ ಹಾಗೂ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ,
ಮುನ್ನಚ್ಚರಿಕೆಗಾಗಿ 4 ಫೈರ್ ಎಂಜಿನ್ ವ್ಯವಸ್ಥೆ, ತುರ್ತು ಸೇವೆಗೆ ಸ್ಥಳದಲ್ಲಿ ಆಂಬುಲೆನ್ಸ್, ಪೊಲೀಸ್ ಬಂದೋಬಸ್ತ್, ಹೆಚ್ಚುವರಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ - 01, ಪೊಲೀಸ್ ಉಪ ಅಧೀಕ್ಷಕ - 07, ಆರಕ್ಷಕ ವೃತ್ತ ನಿರೀಕ್ಷಕ - 23, ಸಹಾಯಕ ಉಪ ನಿರೀಕ್ಷಕ, ಆರಕ್ಷಕ ಉಪ ನಿರೀಕ್ಷಕ - 54, ಸಹಾಯಕ ಉಪ ನಿರೀಕ್ಷಕ - 119, ಮುಖ್ಯ ಪೇದೆ - 251, ಪೇದೆ - 520, ಮಹಿಳಾ ಪೊಲೀಸ್ ಪೇದೆ/ ಮಹಿಳಾ ಮುಖ್ಯ ಪೇದೆ - 90, ಹೆಚ್‍ಜಿ-600, ಕೆಎಸ್‍ಆರ್‍ಪಿ-04, ಡಿಎಎಫ್ -01, ಡಿಎಆರ್-6 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.