ಹಿಂದಿ, ಇಂಗ್ಲಿಷ್ ಬಂಡವಾಳಿಗರ ಭಾಷೆಾದರೆ, ಕನ್ನಡ ಜೀವಭಾಷೆ, ಜನಪರ ಭಾಷೆ. ವಲಸಿಗರಿಗೆ ಕನ್ನಡ ನಾಡು ನೆಲ ಆಶ್ರಯ ನೀಡಿದೆ. ಆದರೆ ಆಶ್ರಯ ನೀಡಿದ ಕನ್ನಡಿಗರನ್ನೇ ವಲಸಿಗ ಬಂಡವಾಳಗಾರರು ಶೋಷಿಸುತ್ತಿರುವುದು ಸರಿಯಲ್ಲ.
ಗಡಿ ಭಾಗದ ನಮ್ಮ ಕೃಷಿಕರ ಭೂಮಿಯನ್ನು ವಲಸಿಗರು ಕಿತ್ತುಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ. ಜಾಗ, ಸ್ಥಾನ ಮಾನ ಕೊಟ್ಟ ಕನ್ನಡಿಗರ ಬಗ್ಗೆ ಈ ರೀತಿಯ ಭಾವನೆ ಹೊಂದಿರುವುದು ಸರಿಯಲ್ಲ. ಆಶ್ರಯ ಕೊಟ್ಟ ಕನ್ನಡಿಗರ ಬಗ್ಗೆ ವಲಸಿಗರೂ ಅಪಾರ ಗೌರವ ಹೊಂದಿರಬೇಕು. ದಲಿತ ಕವಿ ಸಿದ್ದಲಿಂಗಯ್ಯ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಕಸಾಪ ಅಧ್ಯಕ್ಷ ಹಾಲಂಬಿ ಅವರು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದರೆ.
ದಲಿತರೊಬ್ಬರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡುತ್ತೇವೆಂದು ಘೋಷಿಸಿದ್ದ ಹಾಲಂಬಿ ನುಡಿದಂತೆ ನಡೆದುಕೊಂಡಿದ್ದರೆ. ಸೂಕ್ಷ್ಮಮತಿಗಳಾದ ಸಿದ್ದಲಿಂಗಯ್ಯ ತುಳಿತಕ್ಕೊಗಾದವರ ನೋವಿನ ಧ್ವನಿಯಾಗಿದ್ದಾರೆ. ದೌರ್ಜನ್ಯವೆಸಗುವ ಶಕ್ತಿಗಳ ವಿರುದ್ಧ ಧ್ವನಿಯಾಗಿ ನಿಂತಿದ್ದಾರೆ. ಎಲ್ಲವನ್ನೂ ತಣ್ಣಗೆ ಹೇಳುತ್ತಾರೆ. ಅವರ ಕೋಪ ಜನಪರವಾದದ್ದು ಎಂದರು.
ಚಪ್ಪಾಳೆಯ ಸುರಿಮಳೆ
ಉಮಾಶ್ರೀ ಅವರ ಭಾಷಣಕ್ಕೆ ಚಪ್ಪಾಳೆಯ ಹಿಮ್ಮೇಳ. ಕನ್ನಡ, ನೆಲ, ಜಲ ಬಗ್ಗೆ ಉತ್ತೇಜನಕಾರಿ ಮಾತುಗಳನ್ನಾಡುತ್ತಿದ್ದಾಗ ಸಭಿಕರಿಂದ ಜೋರು ಚಪ್ಪಾಳೆ. ಚಾರುಕೀರ್ತಿ ಭಟ್ಟಾರಕರಿಂದಲೂ ಉಮಾಶ್ರೀ ಕುರಿತು ಗುಣಗಾನ.