ವಿಜ್ಞಾನ-ತಂತ್ರಜ್ಞಾನ

ಶ್ರೀನಿವಾಸ ರಾಮಾನುಜನ್ ನೆನಪಿನಲ್ಲಿ 'ರಾಷ್ಟ್ರೀಯ ಗಣಿತ ದಿನ': ಸ್ಮೃತಿ ಇರಾನಿ

Guruprasad Narayana

ನವದೆಹಲಿ: ವಿಶ್ವವಿಖ್ಯಾತ ಗಣಿತಜ್ಞ ದಿವಂಗತ ಶ್ರೀನಿವಾಸ ರಾಮಾನುಜನ್ ನೆನಪಿನಲ್ಲಿ ಇಂದು (ಡಿಸೆಂಬರ್ ೨೨) 'ರಾಷ್ಟ್ರೀಯ ಗಣಿತ ದಿನ'ವಾಗಿ  ಆಚರಿಸುತ್ತಿದ್ದೇವೆ ಎಂದು ಕೇಂದ್ರ ಮಾನವ  ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

ತಮಿಳುನಾಡಿನ ಈರೋಡಿನ ಮೂಲದವರಾದ ಶ್ರೀನಿವಾಸ ರಾಮಾನುಜನ್ ಗಣಿತವಿಜ್ಞಾನ ಕ್ಷೇತ್ರದಲ್ಲಿ ನಡೆಸಿದ ಸಂಶೋಧನೆ ವಿಶ್ವ ವಿಖ್ಯಾತ. ತಮ್ಮ ಗುರು ಮತ್ತು ಮತ್ತೊಬ್ಬ ಗಣಿತಜ್ಞ ಜಿ ಎಚ್ ಹಾರ್ಡಿ ಅವರೊಂದಿಗೆ ಲಂಡನ್ ನಲ್ಲಿ ನಡೆಸಿದ ಸಂಶೋಧನೆ ಗಣಿತ ಶಾಸ್ತ್ರದ ಹಲವು ಕಗ್ಗಂಟುಗಳಿಗೆ ಉತ್ತರ ನೀಡಿತ್ತು. ಲಂಡನ್ ಮ್ಯಾಥಮೆಟಿಕಲ್ ಸೊಸೈಟಿ, ಫೆಲೊ ಆಫ್ ರಾಯಲ್ ಸೊಸೈಟಿ ಮುಂತಾದ ಗೌರವಗಳನ್ನು ಪಡೆದಿದ್ದ ಶ್ರೀನಿವಾಸ ರಾಮಾನುಜನ್ ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ ತಮ್ಮ ೩೨ ನೆ ವಯಸ್ಸಿನಲ್ಲಿ ಆರೋಗ್ಯದ ತೊಂದರೆಗಳಿಂದ ಮೃತಪಟ್ಟಿದ್ದರು.

SCROLL FOR NEXT