ನ್ಯೂಯಾರ್ಕ್: ಸಾಮಾಜಿಕ ತಾಣ ಫೇಸ್‌ಬುಕ್ ಇನ್ನೈದು ವರ್ಷಗಳಲ್ಲಿ ಪೂರ್ತಿ ವೀಡಿಯೋಮಯವಾಗಲಿದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜೂಕರ್‌ಬರ್ಗ್ ಹೇಳಿದ್ದಾರೆ.
ಕ್ಯಾಲಿಫೋರ್ನಿಯಾದಲ್ಲಿ ಜನರೊಂದಿಗೆ ಸಂವಹನ ನಡೆಸಿದ ಜೂಕರ್‌ಬರ್ಗ್ ಅವರಲ್ಲಿ ಫೇಸ್‌ಬುಕ್ ಮೆಸೆಂಜರ್‌ನ್ನು ಆರಂಭಿಸಿದ್ದು ಯಾಕೆ ಎಂದು ಕೇಳಲಾಯಿತು. ಮೆಸೆಂಜರ್‌ನಿಂದಾಗಿ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಸುಲಭವಾಗುತ್ತದೆ. ಬೇರೊಂದು ಆ್ಯಪ್ ಸಹಾಯದಿಂದ ಚಾಟಿಂಗ್ ಮಾಡುವ ಬದಲು ನಾವೇ ಆ್ಯಪ್ ಒದಗಿಸಿದರೆ ಒಳ್ಳೆಯದು ಎಂಬ ಐಡಿಯಾದಿಂದ ಮೆಸೆಂಜರ್‌ನ್ನು ಆರಂಭಿಸಲಾಯಿತು ಎಂದು ಅವರು ಉತ್ತರಿಸಿದ್ದಾರೆ.
ಆದಾಗ್ಯೂ, ಮುಂದಿನ ಐದು ವರ್ಷಗಳಲ್ಲಿ ಫೇಸ್‌ಬುಕ್‌ನಲ್ಲಿ ಎಲ್ಲವೂ ವೀಡಿಯೋಮಯವಾಗಿರುವಂತೆ ಹೊಸ ಬೆಳವಣಿಗೆಗಳನ್ನು ಮಾಡಲಾಗುವುದು ಎಂದು ಜೂಕರ್‌ಬರ್ಗ್ ಮುಂದಿನ ಯೋಜನೆಗಳ ಬಗ್ಗೆ ಹೇಳಿದ್ದಾರೆ.