ವಿಜ್ಞಾನ-ತಂತ್ರಜ್ಞಾನ

ವಾಟ್ಸ್ ಆಪ್ ಗೆ ಫೇಸ್ ಬುಕ್ ಮೆಸೆಂಜರ್ ಹಾಗೂ ಟೆಲಿಗ್ರಾಂ ತೀವ್ರ ಸ್ಪರ್ಧೆ

Guruprasad Narayana

ಫೇಸ್ ಬುಕ್ ಮೆಸಂಜರ್ ಆಪ್ ಈಗ ತಿಂಗಳಿಗೆ ೫೦೦ ಮಿಲಿಯನ್ ಸಕ್ರಿಯ ಬಳಕೆದಾರರೊಂದಿಗೆ ವಾಟ್ಸ್ ಆಪ್ ಗೆ ತೀವ್ರ ಸ್ಪರ್ಧೆ ನೀಡುತ್ತಿದೆ.

೨೦೧೧ ರಲ್ಲಿ ಈ ಫೇಸ್ ಬುಕ್ ಮೆಸಂಜರ್ ಅನ್ನು ಆಪ್ ಆಗಿ ಮಾರ್ಪಾಡು ಮಾಡಿದ್ದನ್ನು ಬಳಕೆದಾರರು ಮೊದ ಮೊದಲು ವಿರೋಧಿಸಿದ್ದರೂ ನಂತರ ಆಪ್ ಮಳಿಗೆಗಳಲ್ಲಿ ನೆಚ್ಚಿನ ಆಪ್ ಆಗಿ ಇದು ಈಗ ಪರಿವರ್ತನೆಗೊಂಡಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾ ಪ್ರಚಾರವನ್ನು ಬಳಕೆ ಮಾಡಿಕೊಂಡಿರುವ ಟೆಲಿಗ್ರಾಮ್ ಮೆಸೆಂಜರ್ ಆಪ್ ಕೂಡ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಮೆಸಂಜರ್ ಗಳಿಗೆ ತೀವ್ರ ಸ್ಪರ್ಧೆಯನ್ನೊಡ್ಡಿದೆ.

ಈ ಸಂಸ್ಥೆ ಭಾರತೀಯ ಮೂಲದ ಸಂಸ್ಥೆಯಲ್ಲದಿದ್ದರೂ, ಮೋದಿ ಅವರ ಮೇಕ್ ಇನ್ ಇಂಡಿಯ ಪ್ರಚಾರವನ್ನು ಹಿಂದಿ ಭಾಷೆಯಲ್ಲಿ ಹೆಚ್ಚು ಪ್ರಸಾರ ಆಗುವಂತೆ ಮಾಡಿ, ವಾಟ್ಸ್ ಆಪ್ ನ್ನು ಡಿಲೀಟ್ ಮಾಡುವಂತೆ ಮೆಸೇಜ್ ಗಳು ಇದರಲ್ಲಿ ಹರಿದಾಡುತ್ತಿವೆ.

ಎರಡೇ ದಿನಗಳಲ್ಲಿ ೧.೫ ಮಿಲಿಯನ್ ಬಳಕೆದಾರರು ಟೆಲಿಗ್ರಾಮ್ ಬಳಸುತ್ತಿದ್ದಾರೆ ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಸದ್ಯಕ್ಕೆ ಸ್ಪರ್ಧೆಯಲ್ಲಿ ಮುಂದಿರುವ ವಾಟ್ಸ್ ಆಪ್ ತಿಂಗಳಿಗೆ ೬೦೦ ಮಿಲಿಯನ್ ಸಕ್ರಿಯ ಬಳಕೆದಾರನ್ನು ಹೊಂದಿದೆ.

SCROLL FOR NEXT