ವಿಜ್ಞಾನ-ತಂತ್ರಜ್ಞಾನ

ಪ್ರಾಚೀನ ಡೈನೋಸಾರ್ ಪಳೆಯುಳಿಕೆ ಪತ್ತೆಹಚ್ಚಿದ ಆಸ್ಟ್ರೇಲಿಯಾ ರೈತ

Guruprasad Narayana

ಬ್ರಿಸ್ಬೇನ್: ೧೦೦ ದಶಲಕ್ಷ ವರ್ಷ ಹಳೆಯ ಡೈನೋಸಾರ್ ಒಂದರ ಪಳೆಯುಳಿಕೆಯನ್ನು ಕ್ವೀನ್ಸ್ಲ್ಯಾಂಡಿನಲ್ಲಿ ತನ್ನ ಸ್ಥಿರಾಸ್ಥಿಯ ಪ್ರದೇಶದಲ್ಲಿ ಆಸ್ಟ್ರೇಲಿಯಾ ರೈತನೊಬ್ಬ ಪತ್ತೆ ಹಚ್ಚಿದ್ದಾನೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.

೧೧೦ ಮತ್ತು ೧೧೫ ಮಿಲಿಯನ್ ವರ್ಷಗಳ ಹಿಂದ ಆಸ್ಟ್ರೇಲಿಯಾ ದ್ವೀಪದ ಸಮುದ್ರವನ್ನು ಆವರಿಸಿದ್ದ 'ಕ್ರೋನೋಸಾರಸ್ ಕ್ವೀನ್ಸ್ಲ್ಯಾಂಡಿಕಸ್' ಎಂದು ಕರೆಯಲಾಗುವ ೧೧ ಮೀಟರ್ ಉದ್ದದ ದೈತ್ಯ ಡೈನೋಸಾರ್ ನ ೧.೬ ಮೀಟರ್ ಉತ್ತದ ದವಡೆ ಮೂಳೆಯನ್ನು ರಾಬರ್ಟ್ ಹ್ಯಾಕನ್ ಎಂಬ ರೈತ ಪತ್ತೆ ಹಚ್ಚಿದ್ದಾನೆ ಎಂದು ಬ್ರಿಸ್ಬೇನ್ ಟೈಮ್ಸ್ ವರದಿ ಮಾಡಿದೆ.

"ಅಕೇಶಿಯಾ ಗಿಡಗಳನ್ನು ನಿರ್ಮೂಲನೆ ಮಾಡುತ್ತಿರುವಾಗ ದೂರದಲ್ಲಿ ಹೊಳೆಯುತ್ತಿದ್ದ ವಸ್ತುವನ್ನು ಕಂಡೆ" ಎನ್ನುತ್ತಾರೆ ಹ್ಯಾಕನ್.

"ಮೊದಲಿಗೆ ಸಮುದ್ರ ಪ್ರಾಣಿಗಳ ಚಿಪ್ಪಿನ ಪಳೆಯುಳಿಕೆ ಎನ್ನಿಸಿ ಮುನ್ನಡೆದೆ, ಆದರೆ ೧೦ ನಿಮಿಷಗಳ ನಂತರ ನನ್ನ ಕುತೂಹಲ ಬೆಳೆದು ಹಿಂತಿರುಗಿದೆ" ಎಂದಿದ್ದಾರೆ.

ಕ್ರೋನೋಸಾರಸ್ ಕ್ವೀನ್ಸ್ಲ್ಯಾಂಡಿಕಸ್ ಗೆ ಮೊಸಳೆಯ ತರಹದ ತಲೆಯಿತ್ತು ಎನ್ನಲಾಗುತ್ತದೆ.

ಇದಕ್ಕೂ ಮೊದಲು ಈ ಡೈನೋಸಾರ್ ನ ಪಳೆಯುಳಿಕೆಗಳು ಪತ್ತೆಯಾದದ್ದು ೧೮೯೯ ರಲ್ಲಿ.

SCROLL FOR NEXT