ವಿಜ್ಞಾನ-ತಂತ್ರಜ್ಞಾನ

ಅಂತರಿಕ್ಷದಲ್ಲಿ ಭಾರತದ 27 ಉಪಗ್ರಹಗಳು

Mainashree

ನವದೆಹಲಿ: 27 ಭಾರತೀಯ ಉಪಗ್ರಹಗಳು ಅಂತರಿಕ್ಷದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.

ಪ್ರಸ್ತುತ ದೇಶದ ಸಂಪರ್ಕ ಜಾಲಕ್ಕೆ ಸಹಾಯ ಮಾಡುತ್ತಿರುವ 11 ಉಪಗ್ರಹಗಳ ಜೊತೆಗೆ ಸುಮಾರು 27 ಭಾರತೀಯ ಉಪಗ್ರಹಗಳು ಕಾರ್ಯಾಚರಣೆ ನಡೆಸುತ್ತಿವೆ.
ಪ್ರಶ್ನಾವಧಿಯಲ್ಲಿ ಮಾಹಿತಿ ನೀಡಿದ ಪ್ರಧಾನಮಂತ್ರಿ ಕಚೇರಿಯ ಸಹಾಯಕ ಸಚಿವ ಜಿತೇಂದ್ರ ಸಿಂಗ್,
ಮುಂದಿನ ತಿಂಗಳು ಇನ್ನೊಂದು ಉಪಗ್ರಹ ಹಾರಿಸಲಾಗುವುದು. ಇನ್ನೂ ಮೂರು ಉಪಗ್ರಹಗಳು ಅಭಿವೃದ್ಧಿಯ ಹಂತದಲ್ಲಿವೆಯೆಂದು ಎಂದು ತಿಳಿಸಿದ್ದಾರೆ.

11 ಸಂಪರ್ಕ ಉಪಗ್ರಹಗಳು, 12 ಭೂ ವೀಕ್ಷಣೆ ಉಪಗ್ರಹಗಳು, 3 ನಾವಿಕ ಉಪಗ್ರಹಗಳು ಹಾಗೂ ಒಂದು ಮಂಗಳ ಯಾನ ಉಪಗ್ರಹ ಪ್ರಸ್ತುತ ಅಂತರಿಕ್ಷದಲ್ಲಿವೆಯೆಂದು ಸಿಂಗ್ ಹೇಳಿದರು.

ಕಳೆದ 7-8 ತಿಂಗಳಲ್ಲಿ ಭಾರತ ಅಂತರಿಕ್ಷ ತಂತ್ರಜ್ಞಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಈಗಾಗಲೇ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಖ್ಯಾತಿ ಹೊಂದಿದ ದೇಶಗಳಲ್ಲಿ ಭಾರತವು ಒಂದೇನಿಸೆದೆ ಎಂದು ಅವರು ಹೇಳಿದರು.

ಸಾರ್ಕ್ ದೇಶಗಳಿಗಾಗಿ ಉಪಗ್ರಹಗಳನ್ನು ಉಡಾಯಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದ್ದು, ತನ್ನ ಬಾಹ್ಯಾಕಾಶ ಸೌಲಭ್ಯವನ್ನು ಇತರ ದೇಶಗಳಿಗೆ ಉಪಯೋಗಿಸಲು ಅವಕಾಶ ನೀಡುವ ಮೂಲಕ ಆದಾಯ ಗಳಿಸುತ್ತದೆ ಎಂದರು.

SCROLL FOR NEXT