ಮೊಬೈಲ್ ಫೋನ್‌ (ಸಾಂದರ್ಭಿಕ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ನಕಲಿ IMEI ನಂಬರ್‌ಗಳ ಫೋನ್‌ಗಳಿಗೆ ನಿಷೇಧ

ನಕಲಿ IMEI ನಂಬರ್‌ಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳಿಗೆ ನಿಷೇಧ ಹೇರಲು ಭಾರತ ಸರ್ಕಾರ ತೀರ್ಮಾನಿಸಿದೆ...

ನವದೆಹಲಿ: ನಕಲಿ IMEI ನಂಬರ್‌ಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳಿಗೆ ನಿಷೇಧ ಹೇರಲು ಭಾರತ ಸರ್ಕಾರ ತೀರ್ಮಾನಿಸಿದೆ.

IMEI (International Mobile Equipment Identity)ಸಂಖ್ಯೆಯನ್ನು ಫಿಂಗರ್ ಪ್ರಿಂಟ್‌ನಂತೆ ನಿಮ್ಮ ಮೊಬೈಲ್ ಫೋನ್‌ಗೆ ಏಕಮಾತ್ರ ಗುರುತು ಎಂದು ಪರಿಗಣಿಸಲ್ಪಡುತ್ತದೆ. ಆದರೆ ನಕಲಿ IMEI  ಹೊಂದಿರುವ ಮೊಬೈಲ್ ಫೋನ್‌ಗಳು ಭಾರತಕ್ಕೆ ಆಮದು ಆಗುತ್ತಿವೆ ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

’00..00' IMEI ಸಂಖ್ಯೆಗಳಿರುವ, ಯಾವುದೇ ಗುರುತುಗಳಿಲ್ಲದ, ನಕಲಿ ಐಡಿಗಳನ್ನು ಹೊಂದಿರುವ ಫೋನ್ ಸೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಆದ್ದರಿಂದ ನಕಲಿ ಅಥವಾ ತದ್ರೂಪ ಮಾಡಲಾದ IMEIಗಳನ್ನು ಹೊಂದಿರುವ ಹ್ಯಾಂಡ್‌ಸೆಟ್‌ಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.

ನಕಲಿ ಹ್ಯಾಂಡ್‌ಸೆಟ್‌ಗಳ ದಂಧೆ ವ್ಯಾಪಕವಾಗಿ ನಡೆಯುತ್ತಿವೆ. ಆದ್ದರಿಂದಲೇ ಸ್ಯಾಮ್‌ಸಂಗ್‌ನಂತಹ ಕಂಪನಿಗಳು ಹೊಸ ಸ್ಮಾರ್ಟ್‌ಫೋನ್‌ಗಳನ್ನು ವಿದೇಶದಲ್ಲಿ ಬಿಡುಗಡೆ ಮಾಡಿದ ಕೂಡಲೇ ಭಾರತದಲ್ಲಿ ಬಿಡುಗಡೆ ಮಾಡಲು ಹೆದರುತ್ತವೆ. ಆ್ಯಪಲ್ ನಂತಹ ದೊಡ್ಡ ಕಂಪನಿಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ.

ಆದಾಗ್ಯೂ, ನಕಲಿ IMEI ಸಂಖ್ಯೆಗಳನ್ನು ಹೊಂದಿರುವ ಸೆಟ್‌ಗಳು ದೇಶದ ಭದ್ರತೆಗೆ ಕೂಡಾ ಮಾರಕವಾಗಿವೆ. ಆದ್ದರಿಂದ ಸರ್ಕಾರ ನಕಲಿ ಐಂಊಐ ಹೊಂದಿರುವ ಜಿಎಸ್‌ಎಂ ಮೊಬೈಲ್ ಫೋನ್, ನಕಲಿ ESN (Electronic Serial Number)/MEID (Mobile Equipment Identifier) ಹೊಂದಿರುವ ಸಿಡಿಎಂಎ ಫೋನ್‌ಗಳ ಆಮದಿಗೆ ನಿಷೇಧ ಹೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT