ವಿಜ್ಞಾನ-ತಂತ್ರಜ್ಞಾನ

ಅಗಸ್ಟ್ 1ರಿಂದ ಗೂಗಲ್ ಪ್ಲಸ್ ಫೋಟೋ ಶಟ್ ಡೌನ್ ?

Rashmi Kasaragodu

ವಾಷಿಂಗ್ಟನ್: 2015 ಅಗಸ್ಟ್ 1ನೇ ತಾರೀಖಿನಿಂದ ಗೂಗಲ್ ಪ್ಲಸ್ ಫೋಟೋ ಸೇವೆಯನ್ನು ಗೂಗಲ್ ಶಟ್ ಡೌನ್ ಮಾಡಲಿದೆ ಎಂದು Techcrunch.com ವರದಿ ಮಾಡಿದೆ. ಗೂಗಲ್ ಮೊದಲಿಗೆ ಆ್ಯಂಡ್ರಾಯ್ಡ್ ಆ್ಯಪ್‌ಗಳಲ್ಲಿರುವ ಗೂಗಲ್ ಪ್ಲಸ್ ಫೋಟೋವನ್ನು ಶಟ್ ಡೌನ್ ಮಾಡಲಿದ್ದು, ತದನಂತರವೇ ವೆಬ್ ಮತ್ತು ಐಒಎಸ್‌ನಲ್ಲಿರುವ ಈ ಸೇವೆಯನ್ನು ಶಟ್ ಡೌನ್ ಮಾಡಲಿದೆ.

ಈಗಾಗಲೇ ಆ್ಯಂಡ್ರಾಯ್ಡ್  ಆ್ಯಪ್ ನಲ್ಲಿ  ಗೂಗಲ್ ಪ್ಲಸ್ ಫೋಟೋಗಳನ್ನು ತೆರೆದಾಗ ಹೊಸ ಗೂಗಲ್ ಫೋಟೋ ಸೇವೆಗಳನ್ನು ಬಳಸುವಂತೆ ಸೂಚಿಸಲಾಗುತ್ತಿದೆ.

ಅದೇ ವೇಳೆ ಗೂಗಲ್ ಪ್ಲಸ್  ಫೋಟೋ ಬಳಕೆದಾರರು ಗೂಗಲ್ ಫೋಟೋಗಳನ್ನು ಬಳಕೆ ಮಾಡಲು ಸಹಾಯವಾಗುವ ಟೂಲ್‌ನ್ನು ಗೂಗಲ್ ತಮ್ಮ ಗೂಗಲ್ ಪ್ಲಸ್ ಫೋಟೋಸ್ ಪೇಜ್‌ನಲ್ಲಿ ಪರಿಚಯಿಸಿದೆ. ಒಂದು ವೇಳೆ ಬಳಕೆದಾರರು ಅಗಸ್ಟ್ 1 ಮುನ್ನ ಗೂಗಲ್ ಪ್ಲಸ್ ಫೋಟೋದಿಂದ ಗೂಗಲ್ ಫೋಟೋಗೆ ವರ್ಗಾವಣೆ ಮಾಡದೇ ಇದ್ದರೆ ಅಲ್ಲಿದ್ದ ಫೋಟೋ ಮತ್ತು ವೀಡಿಯೋಗಳು ಗೂಗಲ್ ಟೇಕ್‌ಔಟ್‌ನಲ್ಲಿ ಲಭ್ಯವಾಗಲಿವೆ ಎಂದು ಗೂಗಲ್ ಹೇಳಿದೆ.

SCROLL FOR NEXT