ಅನ್ಯಗ್ರಹ ಜೀವಿಗಳು (ಕಾಲ್ಪನಿಕ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಏಲಿಯನ್‍ಗೆ ಕಳುಹಿಸಲು ಉತ್ತಮ ಸಂದೇಶ ಸೂಚಿಸಿದ್ರೆ ಬಹುಮಾನ..!

ಅನ್ಯಗ್ರಹ ಜೀವಿಗಳಿಗೆ ಕಳುಹಿಸಲು ಅತ್ಯುತ್ತಮವಾದ ಸಂದೇಶ ವನ್ನು ಯಾರು ರಚಿಸುತ್ತಾರೋ ಅವರಿಗೆ ಬರೋಬ್ಬರಿ 6 ಕೋಟಿ ಬಹುಮಾನ ಸಿಗಲಿದೆ...

ಲಂಡನ್: ಅನ್ಯಗ್ರಹ ಜೀವಿಗಳಿಗೆ ಕಳುಹಿಸಲು ಅತ್ಯುತ್ತಮವಾದ ಸಂದೇಶ ವನ್ನು ಯಾರು ರಚಿಸುತ್ತಾರೋ ಅವರಿಗೆ ಬರೋಬ್ಬರಿ 6 ಕೋಟಿ ಬಹುಮಾನ ಸಿಗಲಿದೆ.

ಆದರೆ, ಒಂದೇ ಒಂದು ಷರತ್ತು. ಅದೇನೆಂದರೆ, ಆ ಸಂದೇಶವು ಮಾನವರು ಬಳಸುವ ಭಾಷೆಯಲ್ಲಿರಬಾರದು! ಏಲಿಯನ್ ಗಳ ಸಂಶೋಧನೆಗಾಗಿ 100 ದಶಲಕ್ಷ ಡಾಲರ್‍ನಷ್ಟು ಹಣಕಾಸು ನೆರವು ನೀಡುತ್ತಿರುವ ರಷ್ಯಾದ ಕೋಟ್ಯಧಿಪತಿ ಯೂರಿ ಮಿಲ್ನರ್ ಅವರು ಈ ಬಹುಮಾನ ಘೋಷಿಸಿದ್ದಾರೆ. ಕಳೆದ ವಾರವಷ್ಟೇ ಖ್ಯಾತ ಬ್ರಿಟೀಷ್ ಭೌತ ಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ಲಂಡನ್‍ನ ರಾಯಲ್ ಸೊಸೈಟಿಯಲ್ಲಿ ಅನ್ಯಗ್ರಹ ಜೀವಿಗಳ ಪತ್ತೆ ಯೋಜನೆಗೆ ಚಾಲನೆ ನೀಡಿದ್ದಾರೆ.

ಮೊದಲಿಗೆ ಅನ್ಯಗ್ರಹದ ನಾಗರಿಕರಿಗೆ ಭೂಮಿಯ ವತಿಯಿಂದ ಒಂದು ಉತ್ತಮ ಸಂದೇಶವನ್ನು ಕಳುಹಿಸ ಬೇಕಾಗಿದೆ. ಅದಕ್ಕಾಗಿ ಜನರಿಂದ ಸಂದೇಶವನ್ನು ಆಹ್ವಾನಿಸುತ್ತಿದ್ದೇವೆ. ಸಂದೇಶಗಳು ಅನ್ಯಗ್ರಹಗಳನ್ನು ತಲುಪಲು ಇನ್ನೂ ಸಾವಿರಾರು ವರ್ಷ ತಲುಪಬಹುದು. ಆದರೆ, ಅದರಲ್ಲಿ ಸಾಕಷ್ಟು ಮಾಹಿತಿ, ವಿವರಗಳಿರಬೇಕಾದ್ದು ಕಡ್ಡಾಯ ಎಂದು ಖಗೋಳಶಾಸ್ತ್ರಜ್ಞ ಫ್ರಾಂಕ್ ಡ್ರೇಕ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮತ್ತೆ ಗಡಿಯೊಳಗೆ ನುಗ್ಗಿದ 'ಪಾಕ್ ಡ್ರೋನ್' ಗಳು, ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!

'ಕರ್ನಾಟಕದ ಹಿತಕ್ಕಿಂತ, ಹೈಕಮಾಂಡ್ ಹಂಗೇ ಹೆಚ್ಚಾಯಿತೇ? ಜರ್ಮನಿ ಚಾನ್ಸೆಲರ್ ಸ್ವಾಗತಿಸದ CM, DCM, ವಿರುದ್ಧ ಬಿಜೆಪಿ ಕಿಡಿ!

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಬಿ- ರಿಪೋರ್ಟ್, ಜ. 22ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಶಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?

SCROLL FOR NEXT