ವಿಜ್ಞಾನ-ತಂತ್ರಜ್ಞಾನ

ಟ್ವಿಟರ್ ನಲ್ಲಿ ಇನ್ನು ಮುಂದೆ ಶಾಪಿಂಗ್ ಮಾಡಿ!

Srinivas Rao BV

ವಾಷಿಂಗ್ ಟನ್: ಫೇಸ್ ಬುಕ್, ವಾಟ್ಸ್ ಅಪ್ ನೊಂದಿಗೆ ಪೈಪೋಟಿ ನೀಡಲು ಮುಂದಾಗಿರುವ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಲವು ಬದಲಾವಣೆಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಟ್ವೀಟ್ ಮಾಡುವುದರೊಂದಿಗೆ ಶಾಪಿಂಗ್ ಕೂಡಾ ಮಾಡಬಹುದಾಗಿದೆ.

ಇದಕ್ಕಾಗಿ ಟ್ವಿಟರ್ ಉತ್ಪನ್ನ ಪುಟವನ್ನು ತಯಾರಿಸಿದ್ದು ಉತ್ಪನ್ನಗಳನ್ನು ಹುಡುಕಿ ಖರೀದಿಸಲು ನೆರವಾಗಲಿದೆ. ಉತ್ಪನ್ನಗಳಿಗೆ ಸಂಬಂಧಿಸಿದ ಟ್ವೀಟ್ ಗಳ ಬಗ್ಗೆಯೂ ಈ ಪುಟದಲ್ಲಿ ಅಪ್ ಡೇಟ್ ಸಿಗಲಿದ್ದು, ಟ್ವಿಟರ್ ಬಳಕೆದಾರರು ಖರೀದಿಗೂ ಮುನ್ನ ಉತ್ಪನ್ನಗಳ ಬೆಲೆ, ಅದರ ಬಗೆಗಿನ ಟ್ವೀಟ್ ನ್ನು ನೋಡಬಹುದಾಗಿದೆ.  

ಇದರೊಂದಿಗೆ ಟ್ವಿಟರ್ ವಿನೂತನ ಸೌಲಭ್ಯವನ್ನು ಕಲ್ಪಿಸಿದ್ದು, ಖರೀದಿಸಿದ ಉತ್ಪನ್ನಗಳನ್ನು ತಮ್ಮನ್ನು ಹಿಂಬಾಲಿಸುತ್ತಿರುವ ಖಾತೆದಾರರಿಗೆ ಶಿಫಾರಸು ಮಾಡುವ ಅವಕಾಶ ನೀಡಲಾಗಿದೆ. ಟ್ವಿಟರ್ ಈ ವಾರ ಬಿಡುಗಡೆ ಮಾಡಿರುವ 2 ಹೊಸ ಸೌಲಭ್ಯ ಇದಾಗಿದೆ. ಈ ಮೊದಲು ಜನಗಳನ್ನು ಹಿಂಬಾಲಿಸುವ(ಫಾಲೋ ಮಾಡುವ ಬದಲು) ಕಾರ್ಯಕ್ರಗಮಗಳನ್ನು ಫಾಲೋ ಮಾಡುವ ವೈಶಿಷ್ಟ್ಯವನ್ನು ಟ್ವಿಟರ್ ಬಿಡುಗಡೆ ಮಾಡಿತ್ತು.

SCROLL FOR NEXT