ವಿಜ್ಞಾನ-ತಂತ್ರಜ್ಞಾನ

ಭಾರತೀಯರು ವಾಟ್ಸಾಪ್, ಸ್ಕೈಪ್‌ನಲ್ಲೇ ಶೇ. 47ರಷ್ಟು ಸಮಯ ಕಳೆಯುತ್ತಾರಂತೆ!

Rashmi Kasaragodu

ನವದೆಹಲಿ: ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಸುವ ಮಂದಿ ವಾಟ್ಸಾಪ್, ವಿ ಚಾಟ್, ಹೈಕ್ ಮತ್ತು ಸ್ಕೈಪ್ ಮೊದಲಾದ ಅಪ್ಲಿಕೇಶನ್‌ಗಳಲ್ಲಿ ಶೇ. 47 ರಷ್ಟು ಸಮಯ ಕಳೆಯುತ್ತಾರಂತೆ!

ಸ್ಮಾರ್ಟ್‌ಫೋನ್‌ಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸುವವರ ಸಂಖ್ಯೆ ಜಾಸ್ತಿ ಇದೆ. ಜನರು ತಮ್ಮ ಫೋನ್‌ಗಳಲ್ಲಿ ಕಮ್ಯೂನಿಕೇಷನ್ ಆ್ಯಪ್‌ಗಳನ್ನು ಯಾವತ್ತೂ ಆನ್ ಆಗಿ ಇಟ್ಟಿರುತ್ತಾರೆ. ಇದಕ್ಕಾಗಿ ಜನರು ಮೊಬೈಲ್ ಬ್ರಾಡ್‌ಬ್ಯಾಂಡ್ ಬಳಕೆ ಮಾಡುತ್ತಾರೆ ಎಂದು ಸ್ವೀಡನ್‌ನ ಟೆಲಿಕಾಂ ಉಪಕರಣ ನಿರ್ಮಾಣ ಕಂಪನಿ ಎರಿಕ್‌ಸನ್ ತಯಾರಿಸಿದ ವರದಿಯಲ್ಲಿ ಉಲ್ಲೇಖಿಸಿದೆ.

ವರದಿಯ ಪ್ರಕಾರ ಭಾರತೀಯರು ವಾಯ್ಸ್, ಇನ್‌ಸ್ಟಂಟ್ ಮೆಸೇಜಿಂಗ್, ವಾಯ್ಸ್ ಓವರ್ ಇಂಟರ್‌ನೆಟ್ (ಸ್ಕೈಪ್), ಇಮೇಲ್ ಮತ್ತು ಸಾಮಾಜಿಕ ತಾಣಗಳಲ್ಲಿ ಪರಸ್ಪರ ಸಂವಹನ ನಡೆಸುತ್ತಿದ್ದು, ತಮ್ಮ ಸಮಯದ ಶೇ. 47ರಷ್ಟು ಹೊತ್ತು ಇಂಥಾ ಆ್ಯಪ್ಗಳಲ್ಲೇ ಕಳೆಯುತ್ತಿದ್ದಾರೆ ಎಂದು ಎರಿಕ್‌ಸನ್ ಹೇಳಿದೆ.

SCROLL FOR NEXT