ವಿಜ್ಞಾನ-ತಂತ್ರಜ್ಞಾನ

ಮಂಗಳ ಗ್ರಹದಲ್ಲಿ 'ಹಸಿರು ಕ್ರಾಂತಿ'ಗೆ ಚಿಂತನೆ

Rashmi Kasaragodu

ವಾಷಿಂಗ್ಟನ್: ಮಂಗಳಗ್ರಹದಲ್ಲಿನ ವಾತಾವರಣವನ್ನೇ ಬದಲಿಸಿ ಅದನ್ನು ಭೂಮಿಯಂತೆ ವಾಸಯೋಗ್ಯವಾಗಿಸಲು ಅಮೆರಿಕದ ಡಿಫೆನ್ಸ್ ಅಡ್ವಾನ್ಸ್‌ಡ್ ರಿಸರ್ಚ್ ಪ್ರೊಜೆಕ್ಟ್ಸ್ ಏಜೆನ್ಸಿ (DARPA)ಯ ಸಂಶೋಧಕರು ಚಿಂತನೆ ನಡೆಸಿದ್ದಾರೆ.

ಭೂಮಿಯಲ್ಲಿ ಬ್ಯಾಕ್ಟೀರಿಯಾ, ಹಾವಸೆ, ದ್ಯುತಿ ಸಂಶ್ಲೇಷಣೆ ನಡೆಸುವ ಸಸ್ಯಗಳನ್ನು ಮಂಗಳನ ಅಂಗಳದಲ್ಲಿ ಬೆಳೆಸುವ ನಿಟ್ಟಿನಲ್ಲಿ ಸಂಶೋಧಕರು ಹೊಸ ಪ್ರಯೋಗಗಳನ್ನು ಕೈಗೊಂಡಿದ್ದಾರೆ.

ಭೂಮಿಯಲ್ಲಿ ಬೆಳೆಯುವಂತಹ ಸಸ್ಯಗಳ ವಂಶವಾಹಿ (ಜೀನ್) ಗಳಲ್ಲಿ ಮಾರ್ಪಾಡು ಮಾಡಿ ಅದನ್ನು ಮಂಗಳ ಗ್ರಹದಲ್ಲಿನ ವಾತಾವರಣದಲ್ಲಿ ಬೆಳೆಯಲು ಒಗ್ಗುವಂತೆ ಮಾಡಲಾಗುತ್ತದೆ.  ಮೊದಲಿಗೆ ಬ್ಯಾಕ್ಟೀರಿಯಾ ಮತ್ತು ಮೈಕ್ರೋ ಆರ್ಗಾನಿಸಂಗಳಲ್ಲಿ ಈ ರೀತಿಯ ಬದಲಾವಣೆಗಳನ್ನು  ಮಾಡಲಾಗುತ್ತದೆ. ಇದು ಯಶಸ್ವಿಯಾದರೆ  ಮಲ್ಟಿ ಸೆಲ್ಯುಲಾರ್ (ಬಹುಕೋಶ) ಸಸ್ಯಗಳಲ್ಲಿ ಈ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತದೆ.
 
ಇಂಥಾ ಸಸ್ಯಗಳು ಮಂಗಳ ಗ್ರಹದಲ್ಲಿ ಬೆಳೆದರೆ, ಮಂಗಳ ಗ್ರಹವು ಮನುಷ್ಯನಿಗೆ ವಾಸಯೋಗ್ಯವಾಗುತ್ತದೆ ಎಂಬುದು ಸಂಶೋಧಕರ ನಿಲುವು ಆಗಿದೆ.

ವಾತಾವರಣದಲ್ಲಿನ ವೈಪರೀತ್ಯಗಳನ್ನು ಸರಿಮಾಡುವ ನಿಟ್ಟಿನಲ್ಲಿ DARPA ಕಾರ್ಯ ವೆಸಗುತ್ತಿದ್ದು, ಹೊಸ ಸಂಶೋಧನೆಗಳ ಮೂಲಕ ಮನುಷ್ಯನ ಉಳಿವಿಗೆ ಬೇಕಾದ ವಾತಾವರಣವನ್ನು ಕಾಪಾಡಲು ಪ್ರಯತ್ನಿಸುತ್ತಿದೆ.

SCROLL FOR NEXT