ವಿಜ್ಞಾನ-ತಂತ್ರಜ್ಞಾನ

ಉತ್ತಮ ದೃಶ್ಯ ಗುಣಮಟ್ಟದ 'ಬ್ಯಾಟಲ್ ಫೀಲ್ಡ್ ಹಾರ್ಡ್ ಲೈನ್'

Srinivasamurthy VN

"ಬ್ಯಾಟಲ್ ಫೀಲ್ಡ್" ಬಹುಶಃ ಕಂಪ್ಯೂಟರ್ ಗೇಮ್ ಅಥವಾ ವಿಡಿಯೋಗೇಮ್ ಗಳನ್ನು ಹೆಚ್ಚಾಗಿ ಇಷ್ಟಪಡುವವರಲ್ಲಿ ಈ ಹೆಸರು ಕೇಳದವರಿಲ್ಲವೇನೋ.. ಅಷ್ಟರ ಮಟ್ಟಿಗೆ ವಿಡಿಯೋ ಗೇಮ್ ಪ್ರಿಯರನ್ನು ಈ ಆಟ ಆಕರ್ಷಿಸಿದೆ.

ಇಎ ವಿಡಿಯೋಗೇಮ್ ತಯಾರಿಕಾ ಸಂಸ್ಥೆ 2002ರಲ್ಲಿ ಮೊಟ್ಟಮೊದಲ ಬಾರಿಗೆ ಬ್ಯಾಟಲ್ ಫೀಲ್ಡ್ ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಬಳಿಕ ಕೆಲವೇ ತಿಂಗಳಲ್ಲಿ ಈ ವಿಡಿಯೋ ಗೇಮ್ ಸರಣಿ ಬಿಡುಗಡೆ ಮಾಡುವಷ್ಟರ ಮಟ್ಟಿಗೆ ಖ್ಯಾತಿ ಗಳಿಸಿತು. ಪ್ರಸ್ತುತ ಬಿಡುಗಡೆಯಾಗಿರುವ 'ಬ್ಯಾಟಲ್ ಫೀಲ್ಡ್ ಹಾರ್ಡ್ ಲೈನ್' 10 ನೇ ಸರಣಿಯಾಗಿದ್ದು, ಅತ್ಯಾಧುನಿಕ ವೆಪನ್ ಗಳು ಮತ್ತು ಉತ್ತಮ ಗುಣಮಟ್ಟದ ದೃಶ್ಯಗಳನ್ನು ಈ ವಿಡಿಯೋಗೇಮ್ ಒಳಗೊಂಡಿದೆ ಎಂಬುದು ಇಎ ವಿಡಿಯೋ ಗೇಮ್ ತಯಾರಿಕಾ ಸಂಸ್ಥೆಯ ಅಂಬೋಣ.

ಈ ಗೇಮ್ ಗೆ ಇತ್ತೀಚೆಗೆ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಘಟನೆಯೇ ಕಾರಣವಂತೆ. ಹೀಗಾಗಿ ರಿಯಾಲಿಟಿ ಇಷ್ಟ ಪಡುವವರಿಗೆ ಬಹುಶಃ ಈ ಗೇಮ್ ಇಷ್ಟವಾಗಬಹುದು. ದುಷ್ಕರ್ಮಿಗಳು ಮತ್ತು ಪೊಲೀಸರ ನಡುವಿನ ಕದನವೇ ಈ ಗೇಮ್ ನ ಜೀವಾಳವಾಗಿದ್ದು, ಅತ್ಯಾಧುನಿಕ ವೆಪನ್ ಗಳು ಮತ್ತು ನಿಗೂಢ ಸನ್ನಿವೇಶಗಳನ್ನು ಇಲ್ಲಿ ಸೇರಿಸಲಾಗಿದೆ. ಕಳ್ಳರು ಮಾಲ್ ಗಳನ್ನು ಮತ್ತು ಮಾಲ್ ಗಳಲ್ಲಿರುವ ಜನರನ್ನು ಒತ್ತೆಯಾಳುಗಳಾಗಿಟ್ಟುಕೊಂಡು ಹೆದರಿಸುವುದು, ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸುವುದು, ದುಡ್ಡಿಗಾಗಿ ಕಾರುಗಳನ್ನು ಅಪಹರಿಸುವ ಕಾರ್ ಕಳ್ಳರ ಹಿಂದೆ ಪೊಲೀಸರು ಓಡುವುದು, ದೇಶ ವಿದ್ರೋಹಿಗಳ ವಿರುದ್ಧದ ಕಾರ್ಯಾಚರಣೆಗಳಂತಹ ರೋಚಕ ಸನ್ನಿವೇಶಗಳನ್ನು ಈ ಗೇಮ್ ನಲ್ಲಿ ಅಳವಡಿಸಲಾಗಿದೆ. ಪ್ರಮುಖವಾಗಿ ಗನ್ ಫೈರಿಂಗ್ ಇಲ್ಲಿ ಆಕರ್ಷಣೆಯಾಗಿದ್ದು, ಸಿಂಗಲ್ ಪ್ಲೇಯರ್ ಮತ್ತು ಮಲ್ಟಿಪ್ಲೇಯರ್ ಫೆಸಿಲಿಟಿ ಕೂಡ ಈ ಗೇಮ್ ನಲ್ಲಿ ಲಭ್ಯವಿದೆ.

ಇನ್ನುಈ ಗೇಮ್ ನಲ್ಲಿ Professional, Enforcer, Mechanic, or Operator ಎಂಬ ಆರಂಭಿಕ ನಾಲ್ಕು ವಿವಿಧ ವಿಭಾಗಗಳನ್ನು ಅಳವಡಿಸಲಾಗಿದ್ದು, ಗೇಮ್ ಆಡಬಯಸುವ ಆಟಗಾರ ಕಡ್ಡಾಯವಾಗಿ ಈ ತರಬೇತಿ ವಿಭಾಗವನ್ನು ಸಂಪೂರ್ಣಗೊಳಿಸಬೇಕಿದೆ. ಆಗ ಮಾತ್ರ ಈ ಗೇಮ್ ನ ರೋಚಕತೆ ಆಟಗಾರನಿಗೆ ತಿಳಿಯಲಿದೆ. ಅಲ್ಲದೆ ಎಷ್ಟು ಚಾಕಚಕ್ಯತೆಯಿಂದ ಆಟಗಾರ ಈ ಗೇಮ್ ನ ಹಂತಗಳನ್ನುಪೂರ್ಣಗೊಳಿಸುತ್ತಾನೆಯೋ ಅದರ ಆಧಾರದ ಮೇಲೆ ಆತನ ರ್ಯಾಕಿಂಗ್ ನಿರ್ಣಯವಾಗುತ್ತದೆ. ಇನ್ನು ಈ ಬ್ಯಾಟಲ್ ಫೀಲ್ಡ್ ಹಾರ್ಡ್ ಲೈನ್ ಗೇಮ್ ತನ್ನ ಸರಣಿಯ ಇತರೆ ಗೇಮ್ ಗಳಿಗೆ ಹೋಲಿಕೆ ಮಾಡಿದರೆ ಕ್ವಿಕೆಸ್ಟ್ ಗೇಮ್ (ತ್ವರತಗತಿಯ ಗೇಮ್)ಎಂಬ ಖ್ಯಾತಿಗೆ ಪಾತ್ರವಾಗಿದೆ.

ಒಟ್ಟಾರೆ ಗನ್ ಫೈರಿಂಗ್ ಗೇಮ್ ಪ್ರಿಯರಿಗೆ ಬ್ಯಾಟಲ್ ಫೀಲ್ಡ್ ಹಾರ್ಡ್ ಲೈನ್ ಗೇಮ್ ಉತ್ತಮ ಆಫ್ಷನ್ ಆಗಿದ್ದು, ಭಾರತದಲ್ಲಿ ಇದರ ಬೆಲೆ ಸುಮಾರು 3500 ರು.ಗಳಿಂದ 5 ಸಾವಿರ ರು,ಗಳವರೆಗೂ ಇದೆ. ಆನ್ ಲೈನ್ ಶಾಪಿಂಗ್ ಪೋರ್ಟಲ್ ಗಳಲ್ಲಿ ಈಗಾಗಲೇ ಇದು ಲಭ್ಯವಿದ್ದು, ಕೆಲ ಪ್ರಮುಖ ಗೇಮರ್ ಶಾಪ್ ಗಳಲ್ಲಿ ಇದರ ಸಿಡಿಗಳು ಲಭ್ಯವಿದೆ. ಇನ್ನು ಎಕ್ಸ್ ಬಾಕ್ಸ್, ಸೋನಿ ಪ್ಲೇ ಸ್ಟೋರ್ ಆವೃತ್ತಿಗಳಲ್ಲಿಯೂ ಈ ಗೇಮ್ ಲಭ್ಯವಿದೆ.

ಗೇಮ್ ಕುರಿತ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

-ಶ್ರೀನಿವಾಸ ಮೂರ್ತಿ ವಿಎನ್

SCROLL FOR NEXT