ಗೂಗಲ್ ಗ್ಲಾಸ್ 
ವಿಜ್ಞಾನ-ತಂತ್ರಜ್ಞಾನ

ಡ್ಯಾನ್ಸ್ ಕಲಿಸಲಿದೆ ಗೂಗಲ್ ಗ್ಲಾಸ್

ಡ್ಯಾನ್ಸ್ ಕಲಿಸುವ ಗ್ಲಾಸ್ ಅನ್ನು ಗೂಗಲ್ ಸಿದ್ದಪಡಿಸಿದ್ದು, ಇನ್ನು ಮುಂದೆ ಈ ಗೂಗಲ್ ಗ್ಲಾಸ್ ನಿಮಗೆ ನೃತ್ಯ ಕಲಿಸಿ...

ಡ್ಯಾನ್ಸ್ ಕಲಿಸುವ ಗ್ಲಾಸ್ ಅನ್ನು ಗೂಗಲ್ ಸಿದ್ದಪಡಿಸಿದ್ದು, ಇನ್ನು ಮುಂದೆ ಈ ಗೂಗಲ್ ಗ್ಲಾಸ್ ನಿಮಗೆ ನೃತ್ಯ ಕಲಿಸಿ ಕೊಡಲಿದೆ.

ತಂತ್ರಜ್ಞಾನದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿರುವ ಗೂಗಲ್, ಬಹುಬಗೆಯ ವಿನ್ಯಾಸದೊಂದಿಗೆ ಈ ಗ್ಲಾಸ್ ತಯಾರಿಸಿದೆ. ಇದು ಅತ್ಯಂತ ಉತ್ಕೃಷ್ಟವಾದ ತಾಂತ್ರಿಕತೆಯನ್ನು ಒಳಗೊಂಡಿದೆ.

ಡ್ಯಾನ್ಸ್ ಕಲಿಸುವ ಹೊಸ ಅಂಶವನ್ನು ಈ ಗ್ಲಾಸ್ ಒಳಗೊಳ್ಳಲಿದ್ದು, ಜನಪ್ರಿಯ ಇಂಟರಾಕ್ಟೀವ್ ವೀಡಿಯೊ ಗೇಮ್  ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಶನ್ ಗೆ ಹೆಜ್ಜೆ ಹಾಕುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

ಈ ಗೂಗಲ್ ಕನ್ನಡಕ ನಿರ್ದಿಷ್ಟವಾದ ಹಾಡಿನ ಸಂಯೋಜನೆಗೆ ಅನುಗುಣವಾಗಿ ನೃತ್ಯ ಚಲನೆಗಳನ್ನು ಹೊಂದಿದ್ದು ಹಾಡು ಮತ್ತು ನೃತ್ಯವನ್ನು ಗುರುತಿಸುವ ಸಾಮರ್ಥ್ಯವನ್ನೂ ಹೊಂದಿದೆಯಂತೆ.

ಅಲ್ಲದೇ ಯಾವುದೇ ಹಾಡಿಗೆ ಅನುಗುಣವಾದ ನೃತ್ಯವನ್ನು ಇದು ಸಂಯೋಜಿಸುತ್ತದೆ ಇದಕ್ಕೆ ಸಂಬಂಧಿಸಿದ ಪರವಾನಗಿ ಹಕ್ಕನ್ನು ಕಂಪನಿ ಪಡೆದುಕೊಂಡಿದ್ದು 2016 ರ ವೇಳೆಯಲ್ಲಿ ಮಾರುಕಟ್ಟೆಯಲ್ಲಿರಲಿದೆ ಎಂದು ಮೂಲಗಳು ತಿಳಿಸಿವೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT