ವಾಶಿಂಗ್ಟನ್: ಸ್ಮಾರ್ಟ್ ಫೋನುಗಳು ಮತ್ತು ಕಂಪ್ಯೂಟರ್ ಗಳಿಗೆ ಅದ್ಭುತ ಸ್ಕ್ರೀನ್ ಸೇವರ್ ಫೋಟೊ ಆಗಬಲ್ಲ ಕೆಂಪು ಗ್ರಹ ಮಂಗಳನ ಮೇಲಿಂದ ಕಾಣುವ ಅದ್ಭತ ಸೂರ್ಯಾಸ್ತವನ್ನು ನಾಸಾದ ಕ್ಯೂರಿಯಾಸಿಟಿ ರೋವರ್ ಸೆರೆ ಹಿಡಿದಿದೆ.
ನೀಲಿ ಆಕಾಶದಿಂದ ಸೂರ್ಯ ಮಾರ್ಟಿಯನ್ ದಿಗಂತದ ಕಡೆ ಇಳಿಯುತ್ತಿರುವುದನ್ನು ರೋವರ್ ಸೆರೆಹಿಡಿದಿದೆ.
ಇದೇ ವರ್ಷದ ಏಪ್ರಿಲ್ 15 ರ ಸೂರ್ಯಾಸ್ತವನ್ನು ಸೆರೆ ಹಿಡಿಯಲು ರೋವರ್ ತನ್ನ ಮಸ್ತ್ ಕ್ಯಾಮರಾವನ್ನು ಬಳಸಿದೆ. ಧೂಳಿನ ಸುಂಟರಗಾಳಿಯ ನಡುವೆ ಈ ಫೋಟೋವನ್ನು ಸೆರೆಹಿಡಿದಿದ್ದು ವಾತಾವರಣದಲ್ಲಿ ಧೂಳಿನ ಕಣಗಳನ್ನು ಸಹ ಕಾಣಬಹುದಾಗಿದೆ.
ಮಂಗಳದ ಗೇಲ್ಸ್ ಹಳ್ಳಕ್ಕೆ ಇಳಿದಾಗಿನಿಂದ ಈ ಗ್ರಹದ ಪ್ರಾಚೀನ ಹಾಗು ಆಧುನಿಕ ವಾತಾವರಣದ ಅಧ್ಯಯನ ನಡೆಸುತ್ತಿದೆ ಕ್ಯೂರಿಯಾಸಿಟಿ. ತಾನು ಇಳಿದ ನಂತರದ ೯೫೬ ನೇ ದಿನ ಕ್ಯೂರಿಯಾಸಿಟಿ ಈ ಫೋಟೊ ತೆಗೆದಿದೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.