ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಬಳಕೆದಾರರು ಹೆಚ್ಚು ಹಣಕಾಸು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ: ಅಧ್ಯಯನ

Guruprasad Narayana

ಮೆಲ್ಬರ್ನ್: ನಮ್ಮ ಹಣಕಾಸಿನ ನಿರ್ಧಾರಗಳನ್ನು ಫೇಸ್ ಬುಕ್ ಹೇಗೆ ಪ್ರಭಾವಿಸಬಲ್ಲುದು ಎಂದು ಎಂದಾದರು ಚಿಂತಿಸಿದ್ದೀರಾ? ಫೇಸ್ ಬುಕ್ಕಿನ ಸುದ್ದಿಗಳನ್ನು ನೋಡಿ ಹೂಡಿಕೆ ಮಾಡುವ ಅಥವಾ ಜೂಜಾಡುವ ಬಳಕೆದಾರರು ತಮ್ಮ ದುಡ್ಡಿನ ಜೊತೆ ಅಜಾಗರೂಕರಾಗಿರುತ್ತಾರೆ ಎಂದು ಆಸ್ಟ್ರೇಲಿಯಾ ಸಂಶೋಧನೆಯೊಂದು ತಿಳಿಸಿದೆ.

ತಮ್ಮ ಹಣಕಾಸಿನ ನಷ್ಟಕ್ಕೆ ಫೇಸ್ ಬುಕ್ ಬಳಕೆದಾರರು ಅಂತರ್ಜಾಲ ಸಾಮಾಜಿಕ ಗುಂಪುಗಳಿಂದ ಸಮಾಧಾನ ಪಡೆದುಕೊಳ್ಳುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಸಿಡ್ನಿಯ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಾರುಕಟ್ಟೆ ಪ್ರವೀಣ ಯೂಜೀನ್ ಚ್ಯಾನ್ ಅವರು ಹೇಳುವಂತೆ ಫೇಸ್ ಬುಕ್ ಸುದ್ದಿಗಳನ್ನು ಗಮನಿಸದ ನಂತರ ಅದರ ಬಳಕೆದಾರರು ಅಂತರ್ಜಾಲ ಹೂಡಿಕೆ, ಅಥವಾ ಜೂಜಾಟ ಮತ್ತು ಕೆಸಿನೋಗಳಿಗೆ ಹೋಗುವುದನ್ನು ಒಂದು ಘಂಟೆಯಾದರು ವಿಳಂಬಿಸಬೇಕು ಎಂದು ತಿಳಿಸಿದ್ದಾರೆ ಎಂದು ವ್ಯಾಲ್ಯೂವಾಕ್.ಕಾಂ ವರದಿ ಮಾಡಿದೆ.

ಹೆಚ್ಚು ಸಮಯ ಕಳೆದಂತೆ ತಪ್ಪು ನಿರ್ಧಾರ ಕೈಗೊಳ್ಳುವುದು ಕಡಿಮೆಯಾಗುತ್ತದೆ ಆದರೆ ಫೇಸ್ ಬುಕ್ ಅನ್ನು ಆಗಾಗ ನೋಡುವವರಿಗೆ ಈ ಅಜಾಗರೂಕ ನಿರ್ಧಾರಗಳನ್ನು ಕೈಗೊಳ್ಳುವುದು ಚಟವಾಗಿ ದಿನಕ್ಕೆ ಹಲವು ಬಾರಿ ಇದಕ್ಕೆ ಸೋಲುತ್ತಾರೆ ಎಂದು ಅಧ್ಯಯನ ತಿಳಿಸಿದೆ.

"ಫೇಸ್ ಬುಕ್ ಬಳಕೆದಾರ ಆಗಿರುವುದರಿಂದ ಹಣಕಾಸು ಅಪಾಯ ಒದಗುವುದಿಲ್ಲ... ಆದರೆ ಫೇಸ್ ಬುಕ್ ಅನ್ನು ಸದಾ ಜಾಲಾಡುವವರು ಹೆಚ್ಚು ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿದಾಗ ಹೀಗಾಗುತ್ತದೆ" ಎಂದು ಚ್ಯಾನ್ ತಿಳಿಸಿದ್ದಾರೆ.

ಫೇಸ್ ಬುಕ್ ಫೀಡ್ ಗಳನ್ನು ನೋಡಿ ಅಪಾಯಕಾರಿ ಹೂಡಿಕೆಗಳನ್ನು ಮಾಡುವುದು ಏಕೆಂದರೆ ತಮ್ಮ ಕುಟುಂಬ ಮತ್ತು ಗೆಳೆಯರು ತಮ್ಮ ನೆರವಿಗೆ ಬರುತ್ತಾರೆ ಎಂಬ ತಪ್ಪು ಗ್ರಹಿಕೆ ಸದಾ ಮನಸ್ಸಿನಲ್ಲಿ ಉಳಿದುಬಿಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT