ಪೊಕ್ರಾನ್ : ಬ್ರಹ್ಮೋಸ್‌ನ ಹೊಸ ಸೂಪರ್ ಸೋನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಪೂರೈಸಿದೆ. ರಾಜಸ್ತಾನದ ಪೊಕ್ರಾನ್ ನಲ್ಲಿ ಈ ಪರೀಕ್ಷೆ ನಡೆದಿದ್ದು, ಮೊಬೈಲ್ ಆಟೋನಾಮಸ್ ಲಾಂಚರ್‌ನಿಂದ ಉಡ್ಡಯಣ ಮಾಡಲಾಗಿತ್ತು. ಶಬ್ದಗಳಿಗಿಂತಲೂ ವೇಗದಲ್ಲಿ ಸಂಚರಿಸುವ ಈ ಕ್ಷಿಪಣಿಯ ಪರಧಿ 300 ಕಿ.ಮಿ ಆಗಿದೆ.
ಬ್ರಹ್ಮೋಸ್‌ನ 50ನೇ ಪ್ರಯೋಗಾರ್ಥ ಉಡ್ಡಯಣವಾಗಿದೆ. ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿದ ಕ್ಷಿಪಣಿ ವ್ಯವಸ್ಥೆಯಾಗಿದೆ ಇದು. ಇದಕ್ಕಿಂತ ಮುನ್ನ ಭಾರತೀಯ ನೌಕಾದಳದ ಯುದ್ಧನೌಕೆ ಐಎನ್‌ಎಸ್ ಕೊಚ್ಚಿಯಿಂದ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿಯಾಗಿ ಉಡ್ಡಯಣ ಮಾಡಿತ್ತು.
ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸುವ ಹೊಸ ಕ್ರೂಯಿಸ್ ಕ್ಷಿಪಣಿಯಾಗಿದೆ ಬ್ರಹ್ಮೋಸ್ 2. ಜಗತ್ತಿನ ಮೊದಲ ಹೈಪರ್‌ಸೋನಿಕ್ ಕ್ಷಿಪಣಿಯಾಗಿದೆ ಬ್ರಹ್ಮೋಸ್ 2. ಶಬ್ದಕ್ಕಿಂತ 5 ರಿಂದ ಏಳು ಪಟ್ಟು ವೇಗದಲ್ಲಿ ಈ ಕ್ಷಿಪಣಿ ಸಂಚರಿಸಲಿದೆ