ವಿಜ್ಞಾನ-ತಂತ್ರಜ್ಞಾನ

ಬ್ರೇಕಿಂಗ್ ನ್ಯೂಸ್ ಗೆ ಅತ್ಯಂತ ಜನಪ್ರಿಯ ಮೂಲ ಟ್ವಿಟರ್

Srinivas Rao BV

ವಾಷಿಂಗ್ ಟನ್: ಸಾಮಾಜಿಕ ಜಾಲತಾಣ ಟ್ವಿಟರ್ ಬ್ರೇಕಿಂಗ್ ನ್ಯೂಸ್ ಪಡೆಯಲು ಇರುವ ಅತ್ಯಂತ ಜನಪ್ರಿಯ ಮೂಲ ಎಂಬುದು ಅಮೇರಿಕದಲ್ಲಿ ನಡೆದ ಅಧ್ಯಯನ ಹೇಳಿದೆ.

ಸಮೀಕ್ಷೆಯಲ್ಲಿ ಭಾಗವಹಿಸಿದ್ದ 5000 ಜನರು ತಾವು ಟ್ವಿಟರ್ ಮೂಲಕವೇ ಬ್ರೆಕಿಂಗ್ ನ್ಯೂಸ್ ಪಡೆಯುತ್ತೇವೆ .ಎಂದು ಹೇಳಿದ್ದಾರೆ. 10 ರಲ್ಲಿ 9  (ಶೇ.86 ) ಮಂದಿ ಟ್ವಿಟರ್ ನ್ನು ಸುದ್ದಿಗಾಗಿಯೇ ಬಳಸುವುದಾಗಿ ತಿಳಿಸಿದ್ದಾರೆ. ಈ ಪೈಕಿ ಶೇ.75 ರಷ್ಟು ಜನರು ಪ್ರತಿ ದಿನ ಬ್ರೇಕಿಂಗ್ ನ್ಯೂಸ್ ನೋಡುವುದಕ್ಕಾಗಿ ಟ್ವಿಟರ್ ಬಳಕೆ ಮಾಡುತ್ತಾರಂತೆ.
 
ಆನ್ ಲೈನ್ ನಲ್ಲೂ ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡ 4700 ಸಾಮಾಜಿಕ ಜಾಲತಾಣ ಬಳಕೆದಾರರು. ಉಳಿದ ಸಾಮಾಜಿಕ ಜಾಲತಾಣ ಬಳಕೆದಾರರಿಗಿಂತ ಟ್ವಿಟರ್ ಬಳಕೆದಾರರು ಅತಿ ಹೆಚ್ಚು ಸುದ್ದಿ ನೋಡುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.
 
ಟ್ವಿಟರ್ ನ ಬಳಕೆದಾರರ ಪೈಕಿ ಶೇ.34 ರಷ್ಟು ಜನರು ಟ್ರೆಂಡಿಂಗ್ ಟಾಪಿಕ್ ನಿಂದ ಸುದ್ದಿ ಪಡೆದರೆ ಉಳಿದ ಶೇ.30 ರಷ್ಟು ಜನರು ಸರ್ಚ್ ಮೂಲಕ ಸುದ್ದಿ ಪಡೆಯುತ್ತಾರಂತೆ. ಅಲ್ಲದೇ ಟ್ವಿಟರ್ ನಿಂದ ಸುದ್ದಿ ಪಡೆಯುವ ಬಳಕೆದಾರರು ಟಿವಿಗಳಲ್ಲಿ ಕಡಿಮೆ ಸುದ್ದಿಯನ್ನು ವೀಕ್ಷಿಸುತ್ತಿದ್ದಾರೆ ಎಂಬ ಅಂಶವೂ ಬಯಲಾಗಿದೆ.

SCROLL FOR NEXT