ವಿಜ್ಞಾನ-ತಂತ್ರಜ್ಞಾನ

ಸೈಬರ್ ಬೆದರಿಕೆ ಅಧ್ಯಯನಕ್ಕಾಗಿ ಅನಿವಾಸಿ ಭಾರತೀಯ ತಜ್ಞನಿಗೆ 188,776 ಡಾಲರ್ ಅನುದಾನ!

Srinivas Rao BV

ವಾಷಿಂಗ್ ಟನ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವಕರಿಂದ ನಡೆಯುತ್ತಿರುವ ಬೆದರಿಕೆ, ಡೇಟಿಂಗ್ ದೌರ್ಜನ್ಯದ ಬಗ್ಗೆ ಅಧ್ಯಯನ ನಡೆಸಲು ಅನಿವಾಸಿ ಭಾರತೀಯ ಸೈಬರ್ ಬೆದರಿಕೆ ತಜ್ಞ ಸಮೀರ್ ಹಿಂದುಜಾ ಅವರಿಗೆ ಫೇಸ್ ಬುಕ್ ನಿಂದ 188,776 ಡಾಲರ್ ಅನುದಾನ ದೊರೆತಿದೆ.

ಅಮೆರಿಕಾದ್ಯಂತ ಚಾಲ್ತಿಯಲ್ಲಿರುವ ಸೈಬರ್ ಬೆದರಿಕೆ ಬಗ್ಗೆ ಬೆಳಕು ಚೆಲ್ಲುವುದು ಅಧ್ಯಯನದ ಮುಖ್ಯ ಉದ್ದೇಶವಾಗಿದೆ. ಅವಮಾನ ಮಾಡುವುದು, ಮುಜುಗರಕ್ಕೀಡುಮಾಡುವುದು, ಕಿರುಕುಳ ನೀಡುವುದು ಸೇರಿದಂತೆ ಹಲವು ರೂಪಗಳಲ್ಲಿ ಸೈಬರ್ ಬೆದರಿಕೆ ಕಂಡುಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೀಡಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಬೆದರಿಕೆ ಬಗ್ಗೆ ಅಧ್ಯಯನ ನಡೆಸಿ ಅದರ ಬಗ್ಗೆ ಮಾಹಿತಿ ನೀಡುವುದಕ್ಕೆ ಹಿಂದುಜಾ ಅವರಿಗೆ ಬೃಹತ್ ಪ್ರಮಾಣದ ಅನುದಾನ ನೀಡಲಾಗಿದೆ.

ಅಮೆರಿಕಾದ ಹಲವು ಹದಿಹರೆಯದವರು ಹಲವು ವಿಧಗಳಲ್ಲಿ ಸೈಬರ್ ಬೆದರಿಕೆ ಡೇಟಿಂಗ್ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಸೈಬರ್ ಬೆದರಿಕೆ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರೂ ಆಗಿರುವ ಹಿಂದುಜಾ ಹೇಳಿದ್ದಾರೆ.

12 -17 ವರ್ಷದ ನಡುವಿನ ಯುವಕ/ ಯುವತಿಯರನ್ನು ಪೋಷಕರ ಅನುಮತಿ ಪಡೆದು ಸಮೀಕ್ಷೆಗೊಳಪಡಿಸಲಾಗುತ್ತದೆ. ಇದರೊಂದಿಗೆ ಸೈಬರ್ ಬೆದರಿಕೆಗೊಳಗಾದ ಸಂತ್ರಸ್ತರನ್ನೂ ಸಹ ಸಮೀಕ್ಷೆಗೊಳಪಡಿಸಲಾಗುತ್ತದೆ ಎಂದು ಹಿಂದುಜಾ ಹೇಳಿದ್ದಾರೆ.

SCROLL FOR NEXT