ನವದೆಹಲಿ: ಫೇಸ್ ಬುಕ್ ತನ್ನ ಜೀರೋ ರೇಟೆಡ್ ಇಂಟರ್ ನೆಟ್ ಡಾಟ್ ಆರ್ಗ್ ನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ಖಾಸಗಿ ಮಾಧ್ಯಮದ ವರದಿಯ ಪ್ರಕಾರ, ಸಂಪರ್ಕ ಪಡೆಯದವರಿಗೆ ಅಂತರ್ಜಾಲ ಸಂಪರ್ಕವನ್ನು ಕಲ್ಪಿಸಲು ಹೊಸ ಟೆಲಿಕಾಮ್ ಆಪರೇಟರ್ ಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಫೇಸ್ ಬುಕ್ ಇಂಟರ್ ನೆಟ್ ಡಾಟ್ ಆರ್ಗ್ ಸೌಲಭ್ಯ ನೆಟ್ ನ್ಯೂಟ್ರಾಲಿಟಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಫೇಸ್ ಬುಕ್ ನ ಉಪಾಧ್ಯಕ್ಷ ಕೆವಿನ್ ಮಾರ್ಟಿನ್ ಹೇಳಿದ್ದಾರೆ.
ಭಾರತದಲ್ಲಿ ಫೇಸ್ ಬುಕ್ ಇಂಟರ್ ನೆಟ್ ಡಾಟ್ ಆರ್ಗ್ ನ್ನು ಹಿಂಪಡೆಯುವ ಉದ್ದೇಶ ಇಲ್ಲ, ಈ ಸೌಲಭ್ಯವನ್ನು ಪ್ರತ್ಯೇಕವಾಗಿ ನೀಡಲಾಗಿಲ್ಲ. ಎಲ್ಲಾ ಆಪರೇಟರ್ ಗಳಿಗೂ ಈ ಸೌಲಭ್ಯ ಲಭ್ಯವಿದೆ ಎಂದು ಮಾರ್ಟಿನ್ ತಿಳಿಸಿದ್ದಾರೆ.
ನೆಟ್ ನ್ಯೂಟ್ರಾಲಿಟಿಯ ಬಗ್ಗೆ ಫೇಸ್ ಬುಕ್ ನಿಲುವನ್ನು ಸ್ಪಷ್ಟಪಡಿಸಿರುವ ಕೆವಿನ್ ಮಾರ್ಟಿನ್, ಟೆಲಿಕಾಂ ಆಪರೇಟರ್ ಳಿಗೆ ಮಿತಿ ವಿಧಿಸುವುದಕ್ಕೆ ಅವಕಾಶ ಇರಬಾರದು ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೆಟ್ ನ್ಯೂಟ್ರಾಲಿಟಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು ಟೆಲಿಕಾಂ ಸಂಸ್ಥೆ ಏರ್ ಟೆಲ್ ಏರ್ ಟೆಲ್ ಜೀರೋ ಮೂಲಕ ಕೆಲವು ವೆಬ್ ಸೈಟ್ ಗಳಿಗೆ ಉಚಿತ ಪ್ರವೇಶ ನೀಡುತ್ತಿದೆ. ಏರ್ ಟೆಲ್ ಜಿರೋಗೆ ಸೇರುವುದಕ್ಕಾಗಿ ವೆಬ್ ಸೈಟ್ ಗಳಿಂದ ಸಂಸ್ಥೆ ಹಣ ಪಡೆಯುತ್ತದೆ. ಇಂಟರ್ ನೆಟ್ ಆರ್ಗ್ ಫೇಸ್ ಬುಕ್ ನದ್ದಾಗಿದ್ದು, ಭಾರತದಲ್ಲಿ ರಿಲಯನ್ಸ್ ಕಮ್ಯುನಿಕೇಶನ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.