ಬೆಂಗಳೂರು: ಆಕಾಶಕಾಯಗಳ ಅಧ್ಯಯನಕ್ಕಾಗಿ ಮೀಸಲಾಗಿರುವ ಬಹುನಿರೀಕ್ಷಿತ ಆಸ್ಟ್ರೋಸ್ಯಾಟ್ ಉಪಗ್ರಹ ಉಡಾವಣೆಗೆ ಇಸ್ರೋ ಸರ್ವಸನ್ನದ್ಧವಾಗಿದೆ.
ಸೆ.28ರ ಉಡಾವಣೆಗೆ 50 ಗಂಟೆಗಳ ಕೌಂಟ್‍ಡೌನ್ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಇದು ದೇಶದ ಪ್ರಪ್ರಥಮ ಖಗೋಳ ಯೋಜನೆ ಉಪಗ್ರಹವಾಗಲಿದೆ.
ಪಿಎಸ್ಎಲ್ವಿ-ಸಿ30 ಉಡಾವಣಾ ವಾಹನ ಆಸ್ಟ್ರೋಸ್ಯಾಟ್‍ನೊಂದಿಗೆ ಇನ್ನೂ 6 ಉಪಗ್ರಹಗಳನ್ನು ಹೊತ್ತೊಯ್ಯಲು ಸಿದ್ಧವಾಗಿದೆ.
ಇಂಡೋನೇಷ್ಯಾ ಮತ್ತು ಕೆನಡಾದ ತಲಾ ಒಂದೊಂದು ಉಪಗ್ರಹಗಳು, ಅಮೆರಿಕದ 4 ನ್ಯಾನೋ ಉಪಗ್ರಹಗಳು ಬಾಹ್ಯಾಕಾಶ ತಲುಪಲಿದ್ದು, ಆಂಧ್ರದ ಹರಿಕೋಟಾದಿಂದ 28ರ ಬೆ.10 ಗಂಟೆಗೆ ಉಡಾವಣೆ ಮಾಡಲಾಗುವುದೆಂದು ಇಸ್ರೋ ಮೂಲಗಳು ತಿಳಿಸಿವೆ.