ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಮೆಸೆಂಜರ್ ನಿಂದ ಗ್ರೂಪ್ ಕಾಲಿಂಗ್ ಸೌಲಭ್ಯ

Srinivas Rao BV

ನ್ಯೂಯಾರ್ಕ್: ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಫೇಸ್ ಬುಕ್ ತನ್ನ ಮೆಸೆಂಜರ್ ಆಪ್ ನಲ್ಲಿ ಗ್ರೂಪ್ ಕಾಲಿಂಗ್ ಸೌಲಭ್ಯ ಜಾರಿಗೊಳಿಸಿದೆ.
ಗ್ರೂಪ್ ಕಾಲ್ ನಲ್ಲಿ 50 ಜನರನ್ನು ಸೇರಿಸಬಹುದಾಗಿದ್ದು  ಇನ್ನು 24 ಗಂಟೆಗಳಲ್ಲಿ ಆಂಡ್ರಾಯ್ಡ್, ಐಒಎಸ್ ಡಿವೈಸ್ ಗಳಲ್ಲೂ  ಈ ಸೌಲಭ್ಯ ಸಿಗಲಿದೆ. ಐಪಿ ಮೂಲಕ ಆಂಡ್ರಾಯ್ಡ್, ಐಒಎಸ್ ಡಿವೈಸ್ ನ ಬಳಕೆದಾರರು ಗ್ರೂಪ್ ವಾಯ್ಸ್ ಪ್ರಾರಂಭ ಮಾಡಬಹುದಾಗಿದೆ.
ಮೆಸೆಂಜರ್ ನಲ್ಲಿ ಟೈಪ್ ಮಾಡುವುದಷ್ಟೇ ಸಾಕಾಗುವುದಿಲ್ಲ, ಕೆಲವು ಸಂದರ್ಭಗಳಲ್ಲಿ ಕರೆ ಕೂಡಾ ಮಾಡಬೇಕಾಗುತ್ತದೆ ಆದ್ದರಿಂದ ಗ್ರೂಪ್ ಕರೆ ಸೌಲಭ್ಯವನ್ನು ಜಾರಿಗೊಳಿಸಿದ್ದೇವೆ, ಇದಕ್ಕಾಗಿ ಮೆಸೆಂಜರ್ ನಲ್ಲಿರುವ ಫೋನ್ ಗುರುತನ್ನು ಆಯ್ಕೆ ಮಾಡಿದರೆ ಗ್ರೂಪ್ ನಲ್ಲಿರುವ ಎಲ್ಲಾ ಸದಸ್ಯರಿಗೆ ಕರೆ ಹೋಗಲಿದೆ ಎಂದು ಮೆಸೆಂಜರ್ ವಕ್ತಾರರು ತಿಳಿಸಿದ್ದಾರೆ.  ಸಂಭಾಷಣೆ ನಡುವೆ ಕರೆ ಕಡಿತಗೊಳಿಸುವುದು ಹಾಗೂ ಗ್ರೂಪ್ ಕಾಲಿಂಗ್ ಗೆ ಸೇರ್ಪಡೆಯಾಗುವ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಮೆಸೆಂಜರ್ ತಿಳಿಸಿದೆ.

SCROLL FOR NEXT