ವಿಜ್ಞಾನ-ತಂತ್ರಜ್ಞಾನ

ಬೆಂಗಳೂರು ನೆಹರೂ ತಾರಾಲಯಕ್ಕೆ ೧೨ ಕೋಟಿ ವೆಚ್ಚದ ನವೀಕರಣ

Guruprasad Narayana

ಬೆಂಗಳೂರು: ಬೆಂಗಳೂರು ನೆಹರೂ ತಾರಾಲಯವನ್ನು ೧೨ ಕೋಟಿ ರೂ ವೆಚ್ಚದಲ್ಲಿ ನವೀಕೃತಗೊಳಿಸಲಾಗುತ್ತಿದೆ ಮತ್ತು ಇದಕ್ಕಾಗಿ ಜರ್ಮನಿಯಿಂದ ಸಾಧನಗಳನ್ನು ಆಮದು ಮಾಡಿಸಿಕೊಳ್ಳಲಾಗುತ್ತಿದೆ.

ನವೀಕರಣ ಯೋಜನೆ ಮಾರ್ಚ್ ನಲ್ಲೇ ಪ್ರಾರಂಭವಾಗಿದ್ದು, ಐದು ತಿಂಗಳುಕಾಲ ನಡೆಯಲಿದೆ. ಇದರಿಂದ ವಹಿವಾಟನ್ನು ಕಳೆದುಕೊಂಡಿರುವುದಷ್ಟೇ ಅಲ್ಲದೆ, ಬೇಸಿಗೆ ರಜದಲ್ಲಿ ತಾರಾಲಯ ವೀಕ್ಷಿಸಲು ಬಂದ ಮಕ್ಕಳಲಿಗೆ ನಿರಾಸೆಯನ್ನು ತಂದಿದೆ.

ಏಪ್ರಿಲ್ ಮತ್ತು ಜೂನ್ ನಡುವೆ ಬೇಸಿಗೆ ರಜೆಗಳಲ್ಲಿ ಪ್ರತಿ ದಿನ ೧೮೦೦ ರಿಂದ ೨೦೦೦ ಜನ ತಾರಾಲಯಕ್ಕೆ ಭೇಟಿ ನೀಡುತ್ತಿದ್ದರು. ಹಿರಿಯರಿಗೆ ೩೫ ರೂ ಮತ್ತು ಮಕ್ಕಳಿಗೆ ೨೦ ರೂ ಟಿಕೆಟ್ ನಿಗದಿ ಪಡಿಸಲಾಗಿತ್ತು. ಈಗ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ತಾರಾಲಯ ತಿಂಗಳಿಗೆ ಸುಮಾರು ೧೨.೫ ಲಕ್ಷ ವಹಿವಾಟನ್ನು ಕಳೆದುಕೊಂಡಿದೆ.

"ಇನ್ನೂ ಉತ್ತಮ ಶ್ರವಣ ಮತ್ತು ದೃಶ್ಯಗಳ ಅನುಭವ ನೀಡಲು ೨೦೦ ಜನ ಕುಳಿತುಕೊಳ್ಳಬಹುದಾದ ಆಡಿಟೋರಿಯಂನನ್ನು ಜೀರ್ಣೋದ್ಧಾರ ಮಾಡುತ್ತಿದ್ದೇವೆ" ಎಂದು ನೆಹರೂ ತಾರಾಲಯದ ನಿರ್ದೇಶಕಿ ಬಿ ಎಸ್ ಶೈಲಜಾ ತಿಳಿಸಿದ್ದಾರೆ.

ಈ ಜೀರ್ಣೊದ್ಧಾರಕ್ಕಾಗಿ ಹಣವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡಿತ್ತು. ನೂತನ ಆಡಿಟೋರಿಯಂ ಸಿನೆಮಾ ಥಿಯೇಟರ್ ಅನುಭವ ನೀಡುತ್ತದೆ ಎನ್ನುತ್ತಾರೆ ಶೈಲಜಾ.

SCROLL FOR NEXT