ವಿಜ್ಞಾನ-ತಂತ್ರಜ್ಞಾನ

ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಫೇಸ್ ಬುಕ್ ನಿಂದ ಸ್ಮಾರ್ಟ್ ಫೋನ್ ಆಪ್

Srinivas Rao BV

ಸ್ಯಾನ್ ಫ್ರಾನ್ಸಿಸ್ಕೋ: ಸ್ಥಳೀಯ ಪ್ರದೇಶಗಳಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಫೇಸ್ ಬುಕ್ ಸ್ಮಾರ್ಟ್ ಫೋನ್ ಆಪ್ ನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.

ಐಫೋನ್ ಗಳ ಮಾದರಿಯಲ್ಲಿ ಗೂಗಲ್ ಆಂಡ್ರಾಯ್ಡ್ ಫೋನ್ ಗಳಲ್ಲೂ ಸ್ಥಳೀಯವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲು ಫೇಸ್ ಬುಕ್  ಶೀಘ್ರವೇ ಆಪ್ ನ್ನು ಬಿಡುಗಡೆ ಮಾಡಲಿದೆ ಎಂದು ಫೇಸ್ ಬುಕ್ ನ ಪ್ರಾಡಕ್ಟ್ ಮ್ಯಾನೇಜರ್ ಆದಿತ್ಯ ತಿಳಿಸಿದ್ದಾರೆ.

ಆನ್ ಲೈನ್ ಸೋಷಿಯಲ್ ನೆಟ್ವರ್ಕ್ ನಲ್ಲಿ ಇವೆಂಟ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಸಂಗೀತ ಕಾರ್ಯಕ್ರಮ, ನಾಟಕ ಸೇರಿದಂತೆ ವಿವಿಧ ರೀತಿಯ ಕಾರ್ಯರ್ಕ್ರಮಗಳ ಬಗ್ಗೆ ವಿವರವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದಕ್ಕಾಗಿಯೇ ಹೊಸ ಆಪ್ ತಯಾರಿಸಿದರೆ ನಿರ್ದಿಷ್ಟ ಪೇಜ್ ನಲ್ಲಿ ಹಂಚಿಕೆಯಾಗಿರುವ ಹೊಸ ಕಾರ್ಯಕ್ರಮಗಳ ಪಟ್ಟಿ ಬಳಕೆದಾರರಿಗೆ ಸುಲಭವಾಗಿ ಸಿಗುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.

ಪ್ರತಿದಿನ 100 ಮಿಲಿಯನ್ ನಷ್ಟು ಜನರು ಫೇಸ್ ಬುಕ್ ನಲ್ಲಿ ಇವೆಂಟ್ ವಿಭಾಗವನ್ನು ಬಳಕೆ ಮಾಡುತ್ತಿದ್ದಾರೆ. ಇದಕ್ಕಾಗಿಯೇ ಪ್ರತ್ಯೇಕ ಆಪ್ ಬಿಡುಗಡೆ ಮಾಡಿದರೆ ಬಳಕೆದಾರರಿಗೆ ಉಪಯೋಗವಾಗಲಿದೆ ಎಂದು ಫೇಸ್ ಬುಕ್ ಅಭಿಪ್ರಾಯಪಟ್ಟಿದೆ. 

SCROLL FOR NEXT