ನವದೆಹಲಿ: ಮೊಬೈಲ್ ಉತ್ಪಾದಕ ಸಂಸ್ಥೆ ಸ್ಯಾಮ್ ಸಂಗ್ ನ ಹೊಸ ಮಾದರಿ ಮೊಬೈಲ್ ಗಳಾದ S8, S8+ ಗಳ ಮುಂಗಡ ಕಾಯ್ದಿರಿಸುವಿಕೆ ಭಾರತದಲ್ಲಿ 80,000 ಯುನಿಟ್ ಗಳನ್ನು ದಾಟಿದೆ.
ಭಾರತದಲ್ಲಿ ಬಿಡುಗಡೆಯಾದ ಮೊಲನೇ ವಾರವೇ 80,000 ಯುನಿಟ್ ಗಳಷ್ಟು ಮುಂಗಡ ಬುಕಿಂಗ್ ನಡೆದಿದ್ದು, ತಿಂಗಳಾಂತ್ಯಕ್ಕೆ 150,000 ಯುನಿಟ್ ಗಳಷ್ಟಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಧ್ವನಿ ಸಹಾಯಕ ಸೌಲಭ್ಯ, 5.8 ಇಂಚಿನ ಗ್ಯಾಲೆಕ್ಸಿ ಎಸ್.8 ಹಾಗೂ 6.2 ಇಂಚಿನ ಗ್ಯಾಲೆಕ್ಸಿ ಎಸ್.8+ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು, ಏ.19 ರಿಂದ ಮುಂಗಡ ಕಾಯ್ದಿರಿಸುವಿಕೆ ನಡೆಯುತ್ತಿದೆ. ಸ್ಯಾಮ್ ಸಂಗ್ ನ ಇ-ಸ್ಟೋರ್ ನಲ್ಲಿ ಸಾಮಾನ್ಯ ಟ್ರಾಫಿಕ್ ಗಿಂತಲೂ 15 ಪಟ್ಟು ಹೆಚ್ಚಿನ ಟ್ರಾಫಿಕ್ ಇದ್ದು ತಾತ್ಕಾಲಿಕ ಡೌನ್ ಟೈಮ್ ಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಗ್ಯಾಲೆಕ್ಸಿ ಎಸ್ 7 ಹಾಗೂ ಎಸ್ 7ಎಡ್ಜ್ ಮೊಬೈಲ್ ಗಳಿಗೆ ಹೋಲಿಸಿದರೆ ಸ್ಯಾಮ್ ಸಂಗ್ S8, S8+ ಮೊಬೈಲ್ ಗಳು 4 ಪಟ್ಟು ಹೆಚ್ಚಿನ ಮುಂಗಡ ಕಾಯ್ದಿರಿಸುವಿಕೆ ಕಂಡಿದ್ದು ಮೇ.2 ರಿಂದ ಡೆಲಿವರಿ ಪ್ರಾರಂಭವಾಗಲಿದೆ ಎಂದು ಸ್ಯಾಮ್ ಸಂಗ್ ತಿಳಿಸಿದೆ.