ವಿಜ್ಞಾನ-ತಂತ್ರಜ್ಞಾನ

ಪ್ರಮಾಣೀಕರಿಸಿದ ಆ್ಯಂಡ್ರಾಯ್ಡ್ ಫೋನ್ ಗಳನ್ನು ಮಾತ್ರ ಖರೀದಿಸಿ: ಗೂಗಲ್

Srinivasamurthy VN

ನವದೆಹಲಿ: ಪ್ರಮಾಣೀಕರಿಸಿದ ಆ್ಯಂಡ್ರಾಯ್ಡ್ ಫೋನ್ ಗಳನ್ನು ಮಾತ್ರ ಖರೀದಿಸಿ ಬಳಕೆ ಮಾಡಿ ಎಂದು ಖ್ಯಾತ ಸರ್ಚ್ ಎಂಜಿನ್ ಗೂಗಲ್ ಹೇಳಿದೆ.

ಸೈಬರ್ ಅಪರಾಧ ಹೆಚ್ಚಳ, ಕಳಪೆ ಫೋನ್ ಗಳಿಂದ ಖಾಸಗಿ ಮಾಹತಿಗಳು ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಗೂಗಲ್ ಇಂತಹುದೊಂದು ಎಚ್ಚರಿಕೆಯನ್ನು ಸ್ಮಾರ್ಟ್ ಫೋನ್ ಬಳಕೆದಾರರಿಗೆ ನೀಡಿದೆ. ಸ್ಮಾರ್ಟ್ ಫೋನ್  ಗುಣಮಟ್ಟದ ಕುರಿತಾದ ವೆಬ್ ಸೈಟ್ ಗೆ ಚಾಲನೆ ಮಾಡಿ ಗೂಗಲ್ ಇಂತಹುದೊಂದು ಸಲಹೆ ನೀಡಿದ್ದು, ತನ್ನ ನೂತನ ವೆಬ್ ಸೈಟಿನಲ್ಲಿ (https://www.android.com/intl/en_in/certified/)ಗೂಗಲ್  ಪ್ರಮಾಣೀಕರಿಸಲ್ಪಟ್ಟ ಸ್ಮಾರ್ಟ್ ಫೋನ್ ಗಳ ಕುರಿತು ಮಾಹಿತಿ ನೀಡಿದೆ. ಗ್ರಾಹಕರು ತಮಗಿಚ್ಛಿಸಿದ ಮೊಬೈಲ್ ಸಂಸ್ಥೆ ಮತ್ತು ಅದರ ಸರಣಿಯನ್ನು ವೆಬ್ ಸೈಟಿನಲ್ಲಿ ನಮೂದು ಮಾಡುವ ಮೂಲಕ ಆ ಸ್ಮಾರ್ಟ್ ಫೋನ್  ಪ್ರಮಾಣೀಕರಿಸಲಸ್ಪಟ್ಟಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರಿಯಬಹುದು.

ವಿಶ್ವಾದ್ಯಂತ ಇರುವ ಲಕ್ಷಾಂತರ ಮೊಬೈಲ್ ತಯಾರಿಕಾ ಸಂಸ್ಥೆಗಳನ್ನು ಅಧ್ಯಯನ ಮಾಡಿರುವ ಗೂಗಲ್ ತಜ್ಞರು ಈ ಸಂಸ್ಥೆಗಳು ತಯಾರಿಸಲ್ಪಟ್ಟ ಸ್ಮಾರ್ಟ್ ಫೋನ್ ಗಳು ಪ್ರಮಾಣೀಕರಿಸ್ಲಟ್ಟಿವೆಯೇ ಇಲ್ಲವೆ ಎಂಬ ಮಾಹಿತಿಗಳ  ದತ್ತಾಂಶವನ್ನು ಈ ವೆಬ್ ಸೈಟಿನಲ್ಲಿ ಹಾಕಿರುತ್ತಾರೆ. ಹೀಗಾಗಿ ವೆಬ್ ಸೈಟ್ ಗೆ ಭೇಟಿ ನೀಡುವ ಗ್ರಾಹಕರು ಗೂಗಲ್ ನ ಪ್ರಮಾಣೀಕರಿಸಲ್ಪಟ್ಟ ಮೊಬೈಲ್ ಗಳ ಪಟ್ಟಿಯಲ್ಲಿ ತಮ್ಮ ಫೋನ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು  ಪರೀಕ್ಷಿಸಿಕೊಳ್ಳಬಹುದು.

ಗೂಗಲ್ ತಜ್ಞರ ಪ್ರಕಾರ ಪ್ರಮಾಣೀಕರಿಸಲ್ಪಡದ ಸ್ಮಾರ್ಟ್ ಫೋನ್ ಗಳಿಂದಾಗಿಯೇ ಹ್ಯಾಕಿಂಗ್, ಸೈಬರ್ ಅಪರಾಧ ಮತ್ತು ಖಾಸಗಿ ಮಾಹಿತಿ ಕದಿಯುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ. ವಿಶ್ವಾದ್ಯಂತ  ಸುಮಾರು 2 ಬಿಲಿಯನ್ ಆ್ಯಂಡ್ರಾಯ್ಡ್ ಫೋನ್ ಗಳು ಚಾಲ್ತಿಯಲ್ಲಿದ್ದು, ಈ ಪೈಕಿ ಪ್ರಮಾಣೀಕರಿಲ್ಪಟ್ಟ ಮೊಬೈಲ್ ಗಳಿಗೆ ಗೂಗಲ್ ಸಂಸ್ಥೆ ತನ್ನ ಗೂಗಲ್ ಪ್ಲೇ ಪ್ರೊಟೆಕ್ಟ್  ವ್ಯವಸ್ಥೆಯನ್ನು ನೀಡಿರುತ್ತದೆ. ಇವುಗಳ ಮೂಲಕ ಫೋನ್ ಗಳಿಗೆ  ಮೂಲಭೂತ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸುವ ಅವಕಾಶವಿದೆ. ಈ ವ್ಯವಸ್ಥೆಯಿಂದಾಗಿ ಮೊಬೈಲ್ ಹ್ಯಾಕಿಂಗ್, ಖಾಸಗಿ ಮಾಹಿತಿ ಕದಿಯುವಿಕೆ ನಂತಹ ಸಮಸ್ಯೆಗಳಿಂದ ದೂರವಿರಬಹುದಾಗಿದೆ.

ಪ್ರತಿ ನಿತ್ಯ ಗೂಗಲ್ ಸುಮಾರು 50 ಬಿಲಿಯನ್ ಆ್ಯಪ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಈ ವ್ಯವಸ್ಥೆ ಮೂಲಕ ಸಮಸ್ಯೆ ಮಾಡಬಹುದಾದ ಆ್ಯಪ್ ಗಳನ್ನು ಕಂಡು ಹಿಡಿಯಬಹುದಾಗಿದೆ.

SCROLL FOR NEXT