ವಿಜ್ಞಾನ-ತಂತ್ರಜ್ಞಾನ

ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳಿಂದ 'ಸ್ಟಾರ್ ವಾರ್ಸ್: ದಿ ಲಾಸ್ಟ್ ಜೇಡಿ' ಸಿನಿಮಾ ವೀಕ್ಷಣೆ

Srinivas Rao BV
ವಾಷಿಂಗ್ ಟನ್: ವಿಶ್ವದ ವಿವಿಧ ಭಾಗಗಳಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿರುವ ಸ್ಟಾರ್ ವಾರ್ಸ್: ದಿ ಲಾಸ್ಟ್ ಜೇಡಿ ಸಿನಿಮಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೂ ದರ್ಶನವಾಗಿದ್ದು, ಗಗನ ಯಾತ್ರಿಗಳು ವೀಕ್ಷಿಸಿದ್ದಾರೆ. 
ನಾಸಾದ ಗಗನ ಯಾತ್ರಿ ಮಾರ್ಕ್ ವೇಂಡ್ ಎಂಬ ಗಗನ ಯಾತ್ರಿ ತಮ್ಮ ತಂಡ ಬಾಹ್ಯಾಕಾಶದಲ್ಲಿ ಸ್ಟಾರ್ ವಾರ್ಸ್ ದಿ ಲಾಸ್ಟ್ ಜೇಡಿ ಸಿನಿಮಾ ವೀಕ್ಷಿಸಿದ್ದನ್ನು ಟ್ವೀಟ್ ಮಾಡಿದ್ದಾರೆ. ಬಾಹ್ಯಾಕಾಶದಲ್ಲಿ ಸಿನಿಮಾ ಪ್ರದರ್ಶನ ಮಾಡುವುದರ ಬಗ್ಗೆ ಸ್ಪಷ್ಟಪಡಿಸಿದ್ದ ನಾಸಾ, ಡಿಸ್ನಿಯ ಸಹಯೋಗದಲ್ಲಿ 54 ಮಂದಿ ಇದ್ದ ತಂಡಕ್ಕೆ ಸಿನಿಮಾ ಪ್ರಸಾರ ಮಾಡುವುದಾಗಿ ಹೇಳಿತ್ತು.   
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೊಸ್ ನ ಗಗನ ಯಾತ್ರಿ ಆಂಟೋನ್ ಶಕ್ಯಾಪ್ಲೊವ್, ಜಪಾನ್ ನ ನಾರಿಶಿಜೆ ಕನೈ ಸೇರಿದಂತೆ 54 ಮಂದಿ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿದ್ದಾರೆ. 2015 ರಲ್ಲಿಯೂ ಇದೇ ಮಾದರಿಯಲ್ಲಿ ಡಿಸ್ನಿ ಸ್ಟಾರ್ ವಾರ್ಸ್ ದಿ ಫೋರ್ಸ್ ಅವೇಕನ್ಸ್ ಮೂವಿಯನ್ನು ಪ್ರದರ್ಶಿಸಿತ್ತು. 
SCROLL FOR NEXT