ವಿಜ್ಞಾನ-ತಂತ್ರಜ್ಞಾನ

ಗ್ರೂಪ್ ಚಾಟ್ ಗಳಲ್ಲಿ 'ರಿಪ್ಲೆ ಪ್ರೈವೆಸಿ' ಆಯ್ಕೆಯನ್ನು ತಪ್ಪಾಗಿ ಸಕ್ರಿಯಗೊಳಿಸಿದ ವಾಟ್ಸ್ ಅಪ್!

Raghavendra Adiga
ಲಂಡನ್: : ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ ಅಪ್ ತನ್ನ ಬೀಟಾ ಆವೃತ್ತಿಯಲಿ 'ರಿಪ್ಲೇ ಪ್ರೈವೆಸಿ ' ವೈಶಿಷ್ಟ್ಯವನ್ನು ಸಕ್ರಿಯ ಗೊಳಿಸಿದ್ದು, ಅದು ಬಳಕೆದಾರರು ಒಂದು ಗ್ರೂಪ್ ನ ಸದಸ್ಯರಿಗೆ ಖಾಸಗಿ ಸಂದೇಶವನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಈ ಸಂದೇಶ ಕಳಿಸಿದ್ದದ್ದು ಗ್ರೂಪ್ ನ ಇತರೆ ಸದಸ್ಯರಿಗೂ ತಿಳಿಯುವುದಿಲ್ಲ. 
ಸದ್ಯ ಈ ವೈಶಿಷ್ಟ್ಯವು ಅಭಿವೃದ್ದಿ ಹಂತದಲ್ಲಿದ್ದು ಇತರೆ ವೈಶುಇಷ್ಟ್ಯಗಳೊಡನೆ ಬಹು ಬೇಗನೇ ಸಕ್ರಿಯ ಗೊಳ್ಳಲಿದೆ ಎಂದು Express.co.uಶೇಳಿದೆ. ಈ ವೈಶಿಷ್ಟ್ಯವು ಹಲವಾರು ಬೀಟಾ ಆವೃತ್ತಿಗಳಲ್ಲಿ ಇದು ಕಾಣಿಸಿಕೊಂಡಿದೆ. ಸಂಸ್ಥೆಯು ಅಭಿಯೋಜಕರು ಈ ವೈಶಿಷ್ಟ್ಯವನ್ನು ತಪ್ಪಾಗಿ ಸಕ್ರಿಯಗೊಳಿಸಿದ್ದಾರೆ ಎಂದು ಜನಪ್ರಿಯ ಚಾಟ್ ಅಪ್ಲಿಕೇಷನ್ ವೆಬ್ ಬೀಟಾ ಇನ್ಫೋದೃಢಪಡಿಸಿದೆ
"ವಿಂಡೋಸ್ ಫೋನ್ 2.17.344  ಗಳ ಹೊಸ ವಾಟ್ಸ್ ಅಪ್ ಬೀಟಾದಲ್ಲಿ ರಿಪ್ಲೇ ಪ್ರೈವೆಸಿ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲಾಗಿದೆ. ಬಹುಶಃ 2.17.342 ರಲ್ಲಿ ವಾಟ್ಸ್ ಅಪ್ ತಪ್ಪಾಗಿ ಅದನ್ನು ಸಕ್ರಿಯಗೊಳಿಸೈತ್ತು," ವೆಬ್ ಬೀಟಾ ಇನ್ಫೋ ಟ್ವೀಟ್ ನಲ್ಲಿ ತಿಳಿಸಿದೆ. ಈ ಆಯ್ಕೆಯನ್ನು ಗ್ರೂಪ್ ಚಾಟ್ ಗಳಲ್ಲಿ ಮಾತ್ರ ಬಳಸಬಹುದಾಗಿದ್ದು ಬಳಕೆದಾರರು ಸಂದೇಶವನ್ನು  ಹಿಡಿದಿಟ್ಟುಕೊಳ್ಳುವಾಗ ಪಾಪ್ಸ್ ಅಪ್ ನೀದುವ ಸಣ್ಣ ಮೆನುವಿನಲ್ಲಿ ಇದು ಸೇರಿತ್ತು ಎಂದು ವೆಬ್ ಬೀಟಾ ಇನ್ಫೋ ಹೇಳಿದೆ.
SCROLL FOR NEXT