ವಿಜ್ಞಾನ-ತಂತ್ರಜ್ಞಾನ

ಬಳಕೆದಾರರಿಗೆ ಮೊಬೈಲ್ ಲೈವ್ ಸ್ಟ್ರೀಮಿಂಗ್ ಅವಕಾಶ ಕಲ್ಪಿಸಿದ ಯೂಟ್ಯೂಬ್

Guruprasad Narayana
ನವದೆಹಲಿ: ಕನಿಷ್ಠ ೧೦,೦೦೦ ಜನ ಅನುಸರಿಸುವ ಬಳಕೆದಾರರಿಗೆ ಯೂಟ್ಯೂಬ್ ಈಗ ಮೊಬೈಲ್ ಲೈವ್ ಸ್ಟ್ರೀಮಿಂಗ್ ಅವಕಾಶಕ್ಕೆ ಅನುವು ಮಾಡಿಕೊಡತ್ತಿದ್ದು, ವಿಡಿಯೋ ಕಂಟೆಂಟ್ ಸೃಷ್ಟಿಕರ್ತರು ಇನ್ನು ಮುಂದೆ ತಮ್ಮ ವಿಡಿಯೋಗಳನ್ನು ನೇರಪ್ರಸಾರ ಮಾಡಬಹುದಾಗಿದೆ. 
ದ ಯಂಗ್ ಟರ್ಕ್ಸ್, ಎಐಬಿ, ಅಲೆಕ್ಸ್ ವಸ್ಸಾಬಿ ಹೀಗೆ ಕನಿಷ್ಠ ೧೦ ಸಾವಿರ ಜನರು ಫಾಲೋ ಮಾಡುವ ಬಳಕೆದಾರರು ಇನ್ನುಮುಂದೆ ಅವರ ವಿಡಿಯೊಗಳನ್ನು ಲೈವ್ ಸ್ಟ್ರೀಮ್ ಮಾಡುವ ಅವಕಾಶ ಪಡೆಯಲಿದ್ದಾರೆ. 
ಈ ಫೀಚರ್ ನಂತರದ ದಿನಗಳಲ್ಲಿ ಎಲ್ಲರಿಗು ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. "ಸಂಸ್ಥೆಯ ಮೊಬೈಲ್ ಆಪ್ ಮೂಲಕ ಈ ಫೀಚರ್ ಅನ್ನು ಪಡೆಯಬಹುದಾಗಿದ್ದು, ಇದರ ಮೂಲಕ ಹೊರಹೊಮ್ಮುವ ವಿಡಿಯೋಗಳು ಇತರ ಯುಟ್ಯೂಬ್ ವಿಡಿಯೋಗಳಂತೆ ಎಲ್ಲ ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರಲಿದೆ" ಎಂದು ಸಂಸ್ಥೆ ತಿಳಿಸಿದೆ. 
'ಸೂಪರ್ ಚಾಟ್' ಎಂಬ ಹಣಗಳಿಸುವ ಟೂಲ್ ಮೂಲಕ ಈ ಲೈವ್ ಸ್ಟ್ರೀಮಿಂಗ್ ವಿಡಿಯೋಗಳಿಂದ ೨೦ ದೇಶಗಳ ಈ ವಿಡಿಯೋ ಸೃಷ್ಟಿಕರ್ತರು ಲಾಭ ಕೂಡ ಪಡೆಯಬಹುದಾಗಿದೆ. 
SCROLL FOR NEXT