ವಿಜ್ಞಾನ-ತಂತ್ರಜ್ಞಾನ

ವಿಡಿಯೊಗಳ ಮಧ್ಯದಲ್ಲಿ ಜಾಹಿರಾತು ತೋರಿಸಲು ಫೇಸ್ ಬುಕ್ ಚಿಂತನೆ

Sumana Upadhyaya
ನ್ಯೂಯಾರ್ಕ್: ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ವಿಡಿಯೋಗಳ ಮಧ್ಯದಲ್ಲಿ ಜಾಹಿರಾತುಗಳನ್ನು ತೋರಿಸಲು ಚಿಂತಿಸುತ್ತಿದ್ದು, ಅದರಿಂದ ಬಂದ ಆದಾಯದಲ್ಲಿ ಶೇಕಡಾ 55ರಷ್ಟನ್ನು ಪ್ರಕಾಶಕರಿಗೆ ನೀಡಲು ಉತ್ಸುಕವಾಗಿದೆ ಎಂದು ವರದಿ ಹೇಳಿದೆ.
ಕಂಪನಿಯು ಹೊಸದಾದ 'ಮಿಡ್ ರೋಲ್' ಜಾಹಿರಾತು ಬಿತ್ತರಿಸುವ ವಿಧಾನಗಳ ಬಗ್ಗೆ ಪರೀಕ್ಷಿಸುತ್ತಿದ್ದು, ಅದು ವಿಡಿಯೊ ಪ್ರಕಾಶಕರು ತಮ್ಮ ವಿಡಿಯೊಗಳ ನಡುವೆ ಕನಿಷ್ಟ 20 ಸೆಕೆಂಡುಗಳ ಜಾಹಿರಾತುಗಳನ್ನು ಅಳವಡಿಸಲು ಅವಕಾಶ ನೀಡುತ್ತದೆ ಎಂದು ರಿ/ಕೋಡ್ ವರದಿ ಮಾಡಿದೆ.
ಜಾಹಿರಾತುಗಳು ವಿಡಿಯೋಗಳ ಮೇಲೆ ಪಾಪ್ ಅಪ್ ಆಗುವ ಅವಕಾಶ ಸಹ ಇದ್ದು, ಅದು ಕನಿಷ್ಟ 90 ಸೆಕೆಂಡುಗಳವರೆಗೆ ಪ್ರಸಾರವಾಗುತ್ತದೆ.
ಫೇಸ್ ಬುಕ್, ಜನರು ವಿಡಿಯೊಗಳನ್ನು ನೋಡುವುದಕ್ಕೆ ತೆಗೆದುಕೊಳ್ಳುವ ಸಮಯಕ್ಕೆ ಫೇಸ್ ಬುಕ್ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ ಹೊರತು ಒಟ್ಟು ವಿಡಿಯೊಗಳನ್ನು ನೋಡಿದ ಸಂಖ್ಯೆಗೆ ಅಲ್ಲ ಎಂಬುದನ್ನು ಹೊಸ ವಿಧಾನದ ಅಳವಡಿಕೆ ಸೂಚಿಸುತ್ತದೆ.
ಕಳೆದ ವರ್ಷ ಫೇಸ್ ಬುಕ್ ನಲ್ಲಿ ಬರುವ ವಿಡಿಯೊಗಳನ್ನು ಟಿವಿಗೆ ಸಂಪರ್ಕಿಸಿ ನೋಡುವ ಅವಕಾಶ ಕೂಡ ಕಲ್ಪಿಸಿತ್ತು. ಅದಕ್ಕೆ ಆಪಲ್ ಟಿವಿ ಅಥವಾ ಗೂಗಲ್ ಕ್ರೋಮ್ ಕಾಸ್ಟ್ ಮೂಲಕ ನೋಡಬಹುದಾಗಿದೆ.
SCROLL FOR NEXT