ವಿಜ್ಞಾನ-ತಂತ್ರಜ್ಞಾನ

ಮಂಗಳ ಗ್ರಹ ಕಕ್ಷೆಯಲ್ಲಿ 1000 ದಿನ ಪೂರೈಸಿದ ಮಂಗಳಯಾನ ನೌಕೆ

Vishwanath S
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಕನಸಿನ ಕೂಸಾಗಿದ್ದ ಮಂಗಳಯಾನ ನೌಕೆಯು ಮಂಗಳ ಗ್ರಹ ಕಕ್ಷೆಯಲ್ಲಿ 1000 ದಿನ ಪೂರೈಸಿದೆ. 
2013ರ ನವೆಂಬರ್ ತಿಂಗಳಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿತ್ತು. ಇನ್ನು 2014ರ ಸೆಪ್ಟೆಂಬರ್ 24ರಂದು ಮಂಗಳ ಗ್ರಹದ ಕಕ್ಷೆಯನ್ನು ಸೇರಿತ್ತು. ಅಂದಿನಿಂದ ತನ್ನ ಕೆಲಸವನ್ನು ಮಂಗಳಯಾನ ಮುಂದುವರೆಸಿತ್ತು. ಇಲ್ಲಿಯವರೆಗೂ ಸರಿಸುಮಾರು 715 ಮಂಗಳ ಗ್ರಹದ ಚಿತ್ರಗಳನ್ನು ಮಂಗಳಯಾನ ಭೂಮಿಗೆ ಕಳುಹಿಸಿದೆ. 
ಭೂಮಿಯಿಂದ 21 ಕೋಟಿ ಕಿ.ಮೀ ದೂರದಲ್ಲಿರುವ ಮಂಗಳ ಗ್ರಹದ ಮೇಲ್ಮೈ ವಾತಾವರಣ, ಮಿಥೇನ್ ಅನಿಲದ ಕುರುಹು, ಜೀವಿಗಳ ವಾಸದ ಕುರಿತು ಮಾಹಿತಿಯನ್ನು ಸಂಗ್ರಹಿಸಿದೆ.
ಇತರ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಕಡಿಮೆ ವೆಚ್ಚದಲ್ಲಿ 450 ಕೋಟಿ ರುಪಾಯಿಯಲ್ಲಿ ಮಂಗಳಯಾನ ನೌಕೆಯನ್ನು ನಿರ್ಮಿಸಲಾಗಿತ್ತು. 
SCROLL FOR NEXT