ವಿಜ್ಞಾನ-ತಂತ್ರಜ್ಞಾನ

ಟ್ವಿಟ್ಟರ್ ನಲ್ಲಿ ನಿಂದನಾತ್ಮಕ ಖಾತೆಗಳ ನಿಗ್ರಹಕ್ಕೆ ಸಜ್ಜಾದ ಕಂಪೆನಿ; ಬಳಕೆದಾರರ ಸುರಕ್ಷತೆಗೆ ಕ್ರಮ

Sumana Upadhyaya
ನ್ಯೂಯಾರ್ಕ್:  ಕಿರುಕುಳದಿಂದ ರಕ್ಷಿಸಲು ಅದರ ಬಳಕೆದಾರರಿಗೆ ಹೆಚ್ಚಿನ ಸೇವೆಯ ವಿನ್ಯಾಸಗಳನ್ನು ಸೇರಿಸಲು ಮುಂದಾಗಿದೆ.
ಟ್ವಿಟ್ಟರ್ ನಲ್ಲಿ ನಿಂದನಾತ್ಮಕ ವಿಷಯಗಳನ್ನು ತೆಗೆಯಲು ಕಂಪೆನಿ ಹೊಸ ಮಾರ್ಗಗಳನ್ನು ಕಳೆದ ಮೂರು ವಾರಗಳಲ್ಲಿ ಎರಡನೇ ಸಲ ಅದು ಬಿಡುಗಡೆ ಮಾಡಿದೆ. 
ಈ ಬಗ್ಗೆ ಯಾರೂ ದೂರು ನೀಡದಿದ್ದರೂ ಸಹ ಇತ್ತೀಚೆಗೆ ಕಂಪೆನಿ ನಿಂದನಾ ನಡವಳಿಕೆಯನ್ನು ತೋರಿಸುವ ಖಾತೆಗಳನ್ನು ಗುರುತಿಸುವ ಕಾರ್ಯ ಪತ್ತೆಹಚ್ಚಲು ಮುಂದಾಗಿದೆ.
ಕೆಲವರು ಟ್ವಿಟ್ಟರ್ ನಲ್ಲಿ ಯಾರಾದರೊಬ್ಬರ ಬಗ್ಗೆ ನಿರಂತರವಾಗಿ ನಿಂದನೆ, ಅಪಮಾನದ ರೀತಿಯಲ್ಲಿ ಟ್ವೀಟ್ ಮಾಡುತ್ತಿರುತ್ತಾರೆ ಎಂದಿಟ್ಟುಕೊಳ್ಳಿ. ಇನ್ನು ಮುಂದೆ ಹಾಗೆ ಟ್ವೀಟ್ ಮಾಡಿದವರ ಟ್ವೀಟ್ ಗಳನ್ನು ಅವರನ್ನು ಫಾಲೋ ಮಾಡುತ್ತಿದ್ದರೆ ಅಥವಾ ಅವರನ್ನು ಉದ್ದೇಶಪೂರ್ವಕವಾಗಿ ಹುಡುಕಿದವರಿಗೆ ಮಾತ್ರ  ಸಿಗುತ್ತದೆ. 
SCROLL FOR NEXT