ವಿಜ್ಞಾನ-ತಂತ್ರಜ್ಞಾನ

ಪ್ರಮುಖ ಸಾಫ್ಟ್ ವೇರ್ ತಂತ್ರಾಂಶಗಳನ್ನು ಜನರಿಗೆ ಉಚಿತವಾಗಿ ನೀಡುವ ನಾಸಾ

Sumana Upadhyaya
ವಾಷಿಂಗ್ಟನ್: ಅತ್ಯಂತ ಸುಧಾರಿತ ಡ್ರೋನ್ಸ್ ಮತ್ತು ನಿಶ್ಯಬ್ದ ವಿಮಾನಗಳಿಗೆ ಸಂಕೇತಗಳು ಸೇರಿದಂತೆ ಸಾರ್ವಜನಿಕವಾಗಿ ಉಚಿತವಾಗಿ ಸಿಗುವಂತೆ ಸಾಫ್ಟ್ ವೇರ್ ಉತ್ಪನ್ನಗಳನ್ನು ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ) ತಯಾರು ಮಾಡಿದೆ.
ಯಾವುದೇ ಗೌರವ ಧನವಿಲ್ಲದೆ ಅಥವಾ ಹಕ್ಕುಸ್ವಾಮ್ಯ ಶುಲ್ಕವಿಲ್ಲದೆ ಜನರು ತಾಂತ್ರಿಕ ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳಬಹುದು.
2017-18ರ ಸಾಫ್ಟ್ ವೇರ್ ಪೂರ್ಣ ಪಟ್ಟಿಗೆ ನಾಸಾದ ಕೇಂದ್ರಗಳಿಂದ ಕೊಡುಗೆ ಸಿಕ್ಕಿದೆ. ಅಂಕಿಅಂಶಗಳ ಪ್ರಕ್ರಿಯೆ/ಸಂಗ್ರಹ, ವಾಣಿಜ್ಯ ವ್ಯವಸ್ಥೆ, ಕಾರ್ಯನಿರ್ವಹಣೆ, ಚಾಲನಾ ವ್ಯವಸ್ಥೆ ಮತ್ತು ವಾಯುಯಾನ ವಿಜ್ಞಾನಗಳ ಸೌಲಭ್ಯವನ್ನು ಇದು ಹೊಂದಿದೆ. ಬಾಹ್ಯಾಕಾಶ ಅನ್ವೇಷಣೆಗೆ ಮತ್ತು ಬ್ರಹ್ಮಾಂಡದ ನಮ್ಮ ತಿಳುವಳಿಕೆ ವಿಸ್ತರಿಸಲು ನಾಸಾ ಕೆಲವು ಟೂಲ್ಸ್ ಗಳನ್ನು ಬಳಸುತ್ತದೆ.
ಹಲವು ಸಾಫ್ಟ್ ವೇರ್ ಪ್ಯಾಕೇಜ್ ಗಳನ್ನು ಮೊದಲ ಬಾರಿಗೆ ನಾಸಾ ಬಿಡುಗಡೆ ಮಾಡಿದೆ. ಈ ಸಾಫ್ಟ್ ವೇರ್ ಪಟ್ಟಿಯ ಮೊದಲ ಆವೃತ್ತಿಯನ್ನು ನಾಸಾ 2014 ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿತ್ತು. ಆ ನಂತರ ನಾಸಾ ಸಾವಿರಾರು ಸಾಫ್ಟ್ ವೇರ್ ಪ್ರೊಗ್ರಾಂಗಳನ್ನು ವಿದ್ಯಾರ್ಥಿಗಳಿಗೆ, ಕೈಗಾರಿಕೆಗಳಿಗೆ, ವ್ಯಕ್ತಿಗಳಿಗೆ ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಿದೆ.
ನಾಸಾ ಮಿಷನ್ ನ ಯಶಸ್ಸಿಗೆ ಮತ್ತು ವೈಜ್ಞಾನಿಕ ಸಂಶೋಧನೆಗೆ ಸಾಫ್ಟ್ ವೇರ್ ಪ್ರಮುಖ ಅಂಶವಾಗಿದೆ. ನಾಸಾದ ಶೇಕಡಾ 30ಕ್ಕೂ ಹೆಚ್ಚು ಸಂಶೋಧನೆಗಳು ಸಾಫ್ಟ್ ವೇರ್ ಗೆ ಸಂಬಂಧಪಟ್ಟದ್ದಾಗಿದೆ ಎಂದು ನಾಸಾ ತಾಂತ್ರಿಕ ವರ್ಗಾವಣೆ ಕಾರ್ಯಕ್ರಮ ನಿರ್ವಾಹಕ ಡಾನ್ ಲೊಕ್ನಿ ತಿಳಿಸಿದ್ದಾರೆ.
SCROLL FOR NEXT