ವಿಜ್ಞಾನ-ತಂತ್ರಜ್ಞಾನ

ಕಣ್ಮರೆಯಾಗಿದ್ದ ಭಾರತದ ಚಂದ್ರಯಾನ-1 ಬಾಹ್ಯಾಕಾಶ ನೌಕೆಯನ್ನು ಪತ್ತೆ ಹಚ್ಚಿದ ನಾಸಾ!

Vishwanath S
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಡಾಯಿಸಿದ್ದ ಭಾರತದ ಮೊಟ್ಟಮೊದಲ ಮಾನವರಹಿತ ಚಂದ್ರಶೋಧಕ ಚಂದ್ರಯಾನ 1 ಬಾಹ್ಯಾಕಾಶ ನೌಕೆ ಈಗಲೂ ಚಂದ್ರನನ್ನು ಸುತ್ತಿತ್ತೆದ ಎಂದು ನಾಸಾ ಹೇಳಿದೆ. 
2008ರಲ್ಲಿ ಚಂದ್ರಯಾನ 1ನ್ನು ಇಸ್ರೋ ಬಾಹ್ಯಾಕಾಶಕ್ಕೆ ಉಡಾಯಿಸಿತ್ತು. ಸುಮಾರು 10 ತಿಂಗಳ ಬಳಿಕ ಅಂದರೆ 2009 ಆಗಸ್ಟ್ 29ರಂದು ಇಸ್ರೋ ಚಂದ್ರಯಾನ 1ರೊಂದಿಗೆ ಸಂವಹನ ಕಳೆದುಕೊಂಡಿತ್ತು. 
ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ನಾಸಾ) ಇದೀಗ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿಯ ವಿಜ್ಞಾನಿಗಳು ಚಂದ್ರಯಾನ 1ನ್ನು ಪತ್ತೆಹಚ್ಚಿದ್ದು, ಚಂದ್ರನಿಂದ ಸುಮಾರು 200 ಕಿ.ಮೀ ಮೇಲೆ ಸುತ್ತು ಹೊಡೆಯುತ್ತಿದೆ ಎಂದು ಹೇಳಿದ್ದಾರೆ. 
ನೂತನ ನೆಲಮಟ್ಟದ ರಾಡಾರ್ ತಂತ್ರಜ್ಞಾನವನ್ನು ನಾಸಾ ಅಭಿವೃದ್ಧಿ ಪಡಿಸಿದ್ದು ಇದರ ಮೂಲಕ ವೀಕ್ಷಣೆ ಮಾಡಿದ ವೇಳೆ ಚಂದ್ರಯಾನ 1 ಹಾಗೂ ನಾಸಾದ ರೋಬಾಟ್ ಗಗನನೌಕೆ ಲೂನಾರ್ ರಿಕನೈಸೆನ್ಸ್ ಆರ್ಬಿಟರ್(ಎಲ್ಆರ್ ಒ)ಕೂಡ ಪತ್ತೆಹಚ್ಚಿದ್ದಾರೆ.
SCROLL FOR NEXT