ವಿಜ್ಞಾನ-ತಂತ್ರಜ್ಞಾನ

ಈ ಸ್ಮಾರ್ಟ್ ಫೋನ್ ಗಳಲ್ಲಿ ಇನ್ನು ಮುಂದೆ ಫೇಸ್ ಬುಕ್, ಮೆಸೆಂಜರ್ ಕಾರ್ಯನಿರ್ವಹಿಸುವುದಿಲ್ಲ!

Srinivas Rao BV
ನ್ಯೂಯಾರ್ಕ್: ಫೇಸ್ ಬುಕ್ ಹಾಗೂ ಮೆಸೆಂಜರ್ ಆಪ್ ಗಳ ಹಳೆಯ ಆವೃತ್ತಿಯನ್ನು ಹೊಂದಿರುವ ಕೆಲವು ಮೊಬೈಲ್ ಫೋನ್ ಗಳಲ್ಲಿ ಇನ್ನು ಮುಂದೆ ಈ ಎರಡೂ ಆಪ್ ಗಳು ಕಾರ್ಯನಿರ್ವಹಿಸುವುದಿಲ್ಲ. 
ಇಂಡಿಪೆಂಡೆಂಟ್ ವರದಿಯ ಪ್ರಕಾರ ಹಳೆಯ ಆವೃತ್ತಿಗೆ ಮಾತ್ರ ಪೂರಕವಾಗಿ ಕಾರ್ಯನಿರ್ವಹಿಸುವ ಸ್ಮಾರ್ಟ್ ಫೋನ್ ಗಳಲ್ಲಿ ಆಪ್ ಗಳ ಕಾರ್ಯನಿರ್ವಹಣೆಯನ್ನು ಮುಂದುವರಿಸದೇ ಇರಲು ಫೇಸ್ ಬುಕ್ ನಿರ್ಧರಿಸಿದೆ. ಆಂಡ್ರಾಯ್ಡ್ ನಲ್ಲಿ ಇರುವ ಫೇಸ್ ಬುಕ್ ನ ವಿ55 ಹಾಗೂ ಮೆಸೆಂಜರ್ ನ ವಿ 10 ಆವೃತ್ತಿಯ ಆಪ್ ಗಳಿಗೂ ಸಹ ಇದು ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. 
ಆಂಡ್ರಾಯ್ಡ್ ಮಾತ್ರವಲ್ಲದೇ, ವಿಂಡೋಸ್ ಫೋನ್ ಗಳಲ್ಲೂ ಸಹ ಫೇಸ್ ಬುಕ್, ಮೆಸೆಂಜರ್ ಆಪ್ ಗಳ ಕಾರ್ಯನಿರ್ವಹಣೆ ಸ್ಥಗಿತಗೊಳ್ಳಲಿದೆ ಎಂದು ವರದಿ ತಿಳಿಸಿದೆ. ಒಂದು ವೇಳೆ ಫೇಸ್ ಬುಕ್ ಹಾಗೂ ಮೆಸೆಂಜರ್ ಆಪ್ ಗಳು ಸ್ಥಗಿತಗೊಂಡರೆ ಇತ್ತೀಚಿನ ಆವೃತ್ತಿಗೆ ಬದಲಿಸಿಕೊಳ್ಳಿ ಅಥವಾ ಫೇಸ್ ಬುಕ್ ಲೈಟ್ ಗೆ ಬದಲಾವಣೆ ಮಾಡಿಕೊಳ್ಳಿ ಎಂದು ಇಂಡಿಪೆಂಡೆಂಟ್ ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. 
ಐಪ್ಯಾಡ್ ನ ವಿ 26, ಐಒಎಸ್ ನ ಮೆಸೆಂಜರ್ ವಿ8, ಐಒಎಸ್ ನ ಫೇಸ್ ಬುಕ್, ವಿಂಡೋಸ್ ಫೋನ್ ನ ಫೇಸ್ ಬುಕ್, ಮೆಸೆಂಜರ್ ಕಾರ್ಯನಿರ್ವಹಣೆ ಮಾಡುವುದಿಲ್ಲ. 
SCROLL FOR NEXT