ವಿಜ್ಞಾನ-ತಂತ್ರಜ್ಞಾನ

ಮತ್ತೊಂದು ಖಗೋಳ ಕೌತುಕ: ಭೂಮಿಗೆ ಸಮೀಪದಲ್ಲೇ ಹಾದುಹೋಗಲಿದೆ ಕ್ಷುದ್ರಗ್ರಹ!

Srinivasamurthy VN
ನವದೆಹಲಿ: ಭೂಮಿಗೆ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಲಿದ್ದು, ಭೂಮಿಯಿಂದ ಸುಮಾರು 44 ಸಾವಿರ ಕಿ.ಮೀ ದೂರದಲ್ಲಿ '2012 ಟಿಸಿ4' ಎಂಬ ಹೆಸರಿನ ಪುಟ್ಟ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ಖಗೋಳ  ವಿಜ್ಞಾನಿಗಳು ತಿಳಿಸಿದ್ದಾರೆ.
ಕ್ಷುದ್ರಗ್ರಹ ಭೂಮಿಗೆ ಅತ್ಯಂತ ಸಮೀದಲ್ಲಿಯೇ ಹಾದು ಹೋಗಲಿದೆಯಾದರೂ ಇದರಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಭೂಮಿಂದ ಸುಮಾರು 36 ಸಾವಿರ ಕಿ.ಮೀ  ದೂರದಲ್ಲಿ ಭೂಮಿಯಿಂದ ರವಾನಿಸಲ್ಪಟ್ಟ ಹಲವು ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳ ಮೇಲೂ ಕ್ಷುದ್ರಗ್ರಹ ಯಾವುದೇ ರೀತಿಯ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ವಿಜ್ಞಾನಿಗಳು ಹೇಳಿರುವಂತೆ ಪ್ರಸ್ತುತ ಭೂಕಕ್ಷೆಗೆ ಸಮೀಪದಲ್ಲಿ ಹಾದುಹೋಗಲಿರುವ '2012 ಟಿಸಿ4' ಪುಟ್ಟ ಕ್ಷುದ್ರಗ್ರಹವಾಗಿದ್ದು, ಒಂದು ಮನೆಯಷ್ಟು ದೊಡ್ಡದಿರಬಹುದು. ಹೀಗಾಗಿ ಇದರಿಂದ ನಮ್ಮ ಉಪಗ್ರಹಗಳಿಗಾಗಲಿ ಅಥವಾ  ಭೂಮಿಗಾಗಲಿ ಅಪಾಯವಿಲ್ಲ. ಒಂದು ವೇಳೆ ಇದು ಭೂಕಕ್ಷೆಯ ಒಳಗೆ ಪ್ರವೇಶ ಮಾಡಿದರೂ ಭೂಮಿಯ ಪ್ರಬಲ ಗುರುತ್ವಾಕರ್ಷಣೆಯ ಬಲದಿಂದಾಗಿ ಆಗಸದಲ್ಲೇ ಸುಟ್ಟು ಭಸ್ಮವಾಗುತ್ತದೆ ಎಂದು ವಿಜ್ಞಾನಿಗಳು  ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT