ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಪ್ರೀಬುಕ್ಕಿಂಗ್‌ : ಒಂದು ಗಂಟೆಯೊಳಗೆ ಆ್ಯಪಲ್ ಐ ಫೋನ್ X ಸೋಲ್ಡ್ ಔಟ್

ಆ್ಯಪಲ್ ಕಂಪನಿಯ ಬಹು ದುಬಾರಿ ಐ ಫೋನ್ ಎಕ್ಸ್ ಕೇವಲ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದೆ...

ನವದೆಹಲಿ:  ಆ್ಯಪಲ್ ಕಂಪನಿಯ ಬಹು ದುಬಾರಿ ಐ ಫೋನ್ ಎಕ್ಸ್ ಕೇವಲ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದೆ.
ಆ್ಯಪಲ್‌ ಕಂಪೆನಿಯ ಹೊಚ್ಚ ಹೊಸ ಐಫೋನ್‌ ಎಕ್ಸ್‌ ಮಾದರಿಯ ಪೋನನ್ನು ಭಾರತ ಸಹಿತ 55 ದೇಶಗಳಲ್ಲಿ ದೊರಕುವಂತೆ ಮಾಡಲಾಗಿತ್ತು. ಭಾರತದಲ್ಲಿ ಇಂದು ಶುಕ್ರವಾರ ಮಧ್ಯಾಹ್ನ 12.30ಕ್ಕೆ ಐ ಫೋನ್‌ ಎಕ್ಸ್‌ ಪ್ರೀ ಆರ್ಡರ್‌ ಬುಕ್ಕಿಂಗ್‌ ಆರಂಭಗೊಂಡಿತ್ತು. 
ಕ್ಯಾಲಿಫೋರ್ನಿಯ ಕ್ಯುಪರ್ಟಿನೋದಲ್ಲೂ  ಪ್ರೀ ಆರ್ಡರ್‌ ತೆರೆಯಲಾಗಿತ್ತು.  ಫ್ಲಿಪ್‌ ಕಾರ್ಟ್‌ ಮತ್ತು ಅನಜಾನ್‌ ನಲ್ಲಿ ಪ್ರೀ ಬುಕ್ಕಿಂಗ್‌ ಆರಂಭಗೊಂಡ ಒಂದು ತಾಸಿಗೂ ಮುನ್ನವೇ ಐಫೋನ್‌ ಎಕ್ಸ್‌ ಸ್ಟಾಕ್‌ ಮುಗಿದು ಹೋಯಿತು. 
ಐ ಫೋನ್‌ ಎಕ್ಸ್‌ 64ಜಿಬಿ ಮತ್ತು 256 ಜಿಬಿ ಮಾಡೆಲ್‌ಗ‌ಳಲ್ಲಿ ಸಿಲ್ವರ್‌ ಮತ್ತು  ಸ್ಪೇಸ್‌ ಗ್ರೇ ಬಣ್ಣದಲ್ಲಿ ಲಭ್ಯವಿದೆ; ನವೆಂಬರ್‌ 3ರಿಂದ ಭಾರತದಲ್ಲಿ 89,000 ರೂ.ಗಳಿಂದ ಲಭ್ಯವಿರುತ್ತದೆ. 
ಒಂದೊಮ್ಮೆ ನೀವು ಐಫೋನ್‌ ಎಕ್ಸ್‌ ಖರೀದಿಯಲ್ಲಿ ಆಸಕ್ತಿ ಹೊಂದಿರುವವರಾದರೆ ನೀವು ನಿಮ್ಮ ಇ-ಮೇಲ್‌ ಐಡಿಯನ್ನು 'ನೋಟಿಫೈ ಮಿ' ಟ್ಯಾಬ್‌ನಲ್ಲಿ  ನಮೂದಿಸಬಹುದಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಶಾರುಖ್ ನಟನೆಯ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರ ಅಕ್ರಮ ಸಂಬಂಧ ಬೆಂಬಲಿಸಿಲ್ಲ: ಕರಣ್ ಜೋಹರ್ ಪೋಸ್ಟ್ ವೈರಲ್!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 47 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!