ವಿಜ್ಞಾನ-ತಂತ್ರಜ್ಞಾನ

ಹೊಸ ಸರಣಿಯ ಐಫೋನ್ ಗಳಲ್ಲಿ ಸಿಗಲಿದೆ ಹಿಂದಿ ಡಿಕ್ಟೇಷನ್ ಸೌಲಭ್ಯ

Raghavendra Adiga
ನವಿ ಮುಂಬೈ: ಹೊಸದಾಗಿ ಬಿಡುಗಡೆಯಾದ ಐಫೋನ್ 8 ಮತ್ತು 8 ಪ್ಲಸ್ ಗಳಲ್ಲಿ ಹಿಂದಿ ಬಾಷೆಗೆ ಸ್ಥಾನ ನೀದಲಾಗಿದೆ. 
ನೂತನ ಮಾದರಿ ಐ ಫೋನ್ ಗಳಲ್ಲಿ ಹಿಂದಿ ಡಿಕ್ಟೇಷನ್ ಗೆ  ಬೆಂಬಲ ಸಿಗಲಿದೆ ಎಂದು ತಂತ್ರಜ್ಞಾನ ದೈತ್ಯ ಆಪಲ್ ನ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ಹೇಳಿದ್ದಾರೆ. ಐಫೋನ್ 8 ಮತ್ತು 8  ಪ್ಲಸ್ 64,000 ರೂ ಗಳಿಗೆ ಮಾರುಕಟ್ಟೆಯಲ್ಲಿ  ಲಭ್ಯವಿರುತ್ತವೆ.
"ನಾವು ಭಾರತಕ್ಕೆ ಒಂದು ಹೊಸ ಕೀಬೋರ್ಡ್ ಅನ್ನು ಪರಿಚಯಿಸಿದ್ದೇವೆ. ಈಗ ಐ ಫೋನ್ ನಲ್ಲಿ 11 ಸ್ಥಳೀಯ ಭಾಷೆಗಳಿಗೆ ಬೆಂಬಲ ನೀಡುತ್ತೇವೆ, ಮತ್ತೀಗ ಐಫೋನ್ ನಲ್ಲಿ  ಹಿಂದಿ ಡಿಕ್ಟೇಷನ್ ಸೌಲಭ್ಯ ಸಿಗಲಿದೆ" ಕುಕ್ ವೀಡಿಯೊ ಸಂದೇಶದಲ್ಲಿ ಹೇಳಿದರು.
ಇದೇ ವೇಳೆ ಕುಕ್ ಸಂದೇಶವನ್ನು ರಿಲಯನ್ಸ್ ಜಿಯೊ ಅವರ ಭಾರತೀಯ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಸಾರ ಮಾಡಲಾಯಿತು.
SCROLL FOR NEXT