ವಿಜ್ಞಾನ-ತಂತ್ರಜ್ಞಾನ

ಫೆಸಿಫಿಕ್ ಸಮುದ್ರದಲ್ಲಿ ಬಿದ್ದ ಚೀನಾದ ಬಾಹ್ಯಾಕಾಶ ಪ್ರಯೋಗಾಲಯ

Srinivasamurthy VN
ಬೀಜಿಂಗ್: ಚೀನಾದ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ 'ಟಿಯಾಂಗಾಂಗ್–1' ಫೆಸಿಫಿಕ್ ಸಮುದ್ರದಲ್ಲಿ ಬಿದ್ದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಚೀನಾ ಬಾಹ್ಯಾಕಾಶ ಸಂಸ್ಥೆ ಟ್ವೀಟ್ ಮಾಡಿದ್ದು, ಇಂದು ಮುಂಜಾನೆ 12.15 ಸುಮಾರಿನಲ್ಲಿ ಭೂಮಿ ವಾತಾವರಣ ಪ್ರವೇಶ ಮಾಡಿದ್ದ 'ಟಿಯಾಂಗಾಂಗ್–1' ಬಳಿಕ ಫಿಸಿಪಿಕ್ ಸಮುದ್ರದಲ್ಲಿ ಬಿದ್ದಿದೆ ಎಂದು ಟ್ವೀಟ್ ಮಾಡಿದೆ. ಅಂತೆಯೇ ಬಾಹ್ಯಾಕಾಶ ಪ್ರಯೋಗಾಲಯದ ಬಹುತೇಕ ಭಾಗ ಆಗಸದಲ್ಲೇ ಭೂಮಿಯ ವಾತಾವರಣ ತಲುಪುತ್ತಿದ್ದಂತೆಯೇ ದಹಿಸಿ ಹೋಗಿದ್ದು, ಉಳಿದ ಭಾಗ ಮಾತ್ರ ಸಮುದ್ರದಲ್ಲಿ ಬಿದ್ದಿದೆ ಎಂದು ಚೀನಾ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.
ಚೀನಾದ ಬಾಹ್ಯಾಕಾಶ ಪ್ರಯೋಗಾಲಯ ‘ಟಿಯಾಂಗಾಂಗ್–1’ ತನ್ನ ಕಾರ್ಯಾಚರಣೆ ಅವಧಿ ಪೂರೈಸಿತ್ತು. ಸುಮಾರು 10.4 ಮೀಟರ್ ಉದ್ಧದ ಟಿಯಾಂಗಾಂಗ್–1 ಪ್ರಯಾಗಾಲಯವನ್ನು 2011ರಲ್ಲಿ ಬಾಹ್ಯಾಕಾಶಕ್ಕೆ ರವಾನೆ ಮಾಡಲಾಗಿತ್ತು. ಸುಮಾರು 7 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿದ ಟಿಯಾಂಗಾಂಗ್–1 ಪ್ರಯೋಗಾಲಯ ತನ್ನ ಕಾರ್ಯಾಚರಣೆ ನಿಲ್ಲಿಸಿತ್ತು, ಈ ಹಿಂದೆ 2017ರ ಅಂತ್ಯದಲ್ಲಿ ಇದು ಭೂಮಿಗೆ ಅಪ್ಪಳಿಸಲಿದೆ ಎಂದು ಹೇಳಲಾಗಿತ್ತು. ಆದರೆ ಈ ಕಾರ್ಯಾಚರಣೆ ತಾಂತ್ರಿಕ ದೋಷದಿಂದ ವಿಳಂಬವಾದ ಹಿನ್ನಲೆಯಲ್ಲಿ ನಾಳೆ ಅಂದರೆ ಏಪ್ರಿಲ್ 2 ಸೋಮವಾರ ಅಂದರೆ ಇಂದು ಬಾಹ್ಯಾಕಾಶ ಪ್ರಯೋಗಾಲಯ ಭೂಮಿಯ ವಾತವರಣ ಪ್ರವೇಶಿಸಿ ದಹನವಾಗಿದೆ. ಉಳಿದ ಭಾಗ ಫೆಸಿಫಿಕ್ ಸಮುದ್ರದಲ್ಲಿ ಬಿದ್ದಿದೆ.
SCROLL FOR NEXT