ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಮೆಸೆಂಜರ್ ನಲ್ಲಿ ಇನ್ಮುಂದೆ 360 ಡಿಗ್ರಿ ಫೋಟೊ, ಹೆಚ್ ಡಿ ವಿಡಿಯೋ ಕಳಿಸುವ ಸೌಲಭ್ಯ

Srinivas Rao BV
ನವದೆಹಲಿ: ಫೇಸ್ ಬುಕ್ ಸಂಸ್ಥೆ ತನ್ನ ಮೆಸೆಜಿಂಗ್ ಆಪ್ ನ್ನು ಮತ್ತಷ್ಟು ಆಕರ್ಷಕವಾಗಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ಫೇಸ್ ಬುಕ್ ಮೆಸೆಂಜರ್ ಮೂಲಕ 360 ಡಿಗ್ರಿ ಫೋಟೊ ಹಾಗೂ ಹೆಚ್ ಡಿ ವಿಡಿಯೋಗಳನ್ನು ಕಳಿಸುವ ಸೌಲಭ್ಯ ಸಿಗಲಿದೆ. 
ಐಒಎಸ್ ಹಾಗೂ ಆಂಡ್ರಾಯ್ಡ್ ಗಳಲ್ಲಿ ಈ ಸೌಲಭ್ಯ ಲಭ್ಯವಾಗಿರಲಿದ್ದು, ಮೆಸೆಂಜರ್ ನಲ್ಲಿ ಫೋಟೋ ಕಳಿಸುವುದು ಮತ್ತಷ್ಟು ಆಕರ್ಷಕವಾಗಿರಲಿದೆ.  ವರ್ಷದ ಪ್ರಾರಂಭದಲ್ಲಿ ಮೆಸೆಂಜರ್ ಮೂಲಕ ಫೋಟೊಗಳು, ವಿಡಿಯೋ, ಸ್ಟಿಕರ್, ಜಿಫ್ ಗಳನ್ನು ಕಳಿಸುವ ಸೌಲಭ್ಯವನ್ನು ಮೆಸೆಂಜರ್ ಒದಗಿಸಿತ್ತು. ಹೊಸ ಆಯ್ಕೆಗಳನ್ನು ಬಳಸಲು ಗ್ರಾಹಕರು ಮೆಸೆಂಜರ್ ಆಪ್ ನ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕಿದೆ. 
SCROLL FOR NEXT